– ತಾಲಿಬಾನ್‍ಗಳಿಂದ ಚೀನಾಗೆ ಆತಂಕ
– ಗುಲಾಮಗಿರಿಯ ಸಂಕೋಲೆ ತುಂಡರಿಸಿದೆ: ಇಮ್ರಾನ್ ಖಾನ್
ಇಸ್ಲಾಮಾಬಾದ್/ಬೀಜಿಂಗ್/ತೆಹರಾನ್: ಸ್ಥಾಪಿತ ಸರ್ಕಾರವನ್ನು ಕೆಡವಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ಉಗ್ರರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ಪಾಕಿಸ್ತಾನ, ಚೀನಾ, ಇರಾನ್ ಸರ್ಕಾರ ಸ್ವಾಗತಿಸಿವೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಾಲಿಬಾನ್ ಸಂಘಟನೆಯು ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ವಿಶ್ಲೇಷಿಸಿ ಇಂಗ್ಲಿಷ್ ಶಾಲೆಗಳಿಂದ ಅಫ್ಘನ್ ಸಂಸ್ಕೃತಿ ನಾಶವಾಗುತ್ತಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.
Advertisement
Advertisement
ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗುತ್ತೀರಿ. ಇದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು. ಈಗ ತಾಲಿಬಾನ್ ಆ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ಬಣ್ಣಿಸಿದ್ದಾರೆ.
Advertisement
ಅಫ್ಘಾನಿಸ್ತಾನದ ಬಗ್ಗೆ ಚೀನಾ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿ, ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ. ತಾಲಿಬಾನ್ ಜತೆ ಸಹಕಾರ ಹಾಗೂ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು
Advertisement
ಚೀನಾಗೆ ಭಯ ಯಾಕೆ?
ಅಫ್ಘಾನಿಸ್ತಾನದ ಜತೆ ಚೀನಾ 76 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘರ್ ಮುಸ್ಲಿಮರಿದ್ದಾರೆ. ಈ ಹಿಂದೆ ಉಯಿಘುರ್ ಮುಸ್ಲಿಮವರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟು ದಾಳಿ ಮಾಡಿದ ಹಿನ್ನೆಲೆಯಲ್ಲಿ ಇವರನ್ನು ಚೀನಾ ಕಟುವಾಗಿ ನಡೆಸಿಕೊಳ್ಳುತ್ತಿದೆ. ಈ ವಿಚಾರದ ಬಗ್ಗೆ ವಿಶ್ವದ ಮುಸ್ಲಿಮ್ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಘನೆ ಆಗುತ್ತಿದೆ ಎಂದು ದೂರುತ್ತಿದೆ.
ಶತ್ರುವಿನ ಶತ್ರು ಮಿತ್ರ ಎನ್ನುವ ಮಾತಿನಂತೆ ಈಗ ತಾಲಿಬಾನ್ ಹಾಗೂ ಉಯಿಘರ್ ಮುಸ್ಲಿಮರು ಒಂದಾಗುವ ಸಾಧ್ಯತೆ ಇದೆ. ಇದು ಚೀನಾದ ಆತಂಕ ಹೆಚ್ಚಿಸಿದ್ದು ಈ ಕಾರಣಕ್ಕೆ ತಾಲಿಬಾನ್ ಜೊತೆ ಉತ್ತಮ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ ಎಂವ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್
Violence & war—like occupation—never solve problems.
Iran welcomes announcement by @KarzaiH on forming a Coordination Council by Afghan leaders.
We hope that it can lead to dialogue & a peaceful transition in Afghanistan.
Iran stands ready to continue its peacemaking efforts.
— Javad Zarif (@JZarif) August 15, 2021
ಇರಾನ್ ಬೆಂಬಲ:
ಅಮೆರಿಕದ ವಿರುದ್ಧ ಕಿಡಿಕಾರುತ್ತಿರುವ ಇರಾನ್ ಅಫ್ಘಾನಿಸ್ತಾನದಲ್ಲಿ ಸ್ಥಾಪನೆಯಾದ ತಾಲಿಬಾನ್ ಸರ್ಕಾರವನ್ನು ಸ್ವಾಗತಿಸಿದೆ. ಇರಾನ್ ಸರ್ಕಾರದ ಅಧಿಕಾರಿ ಪ್ರತಿಕ್ರಿಯಿಸಿ, ಹಿಂಸೆ ಮತ್ತು ಯುದ್ಧ ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ನಾಯಕ ಹಮೀದ್ ಕರ್ಜಾಯ್ ಅವರು ಸರ್ಕಾರ ರಚಿಸಲು ಅಫ್ಘಾನ್ ನಾಯಕರ ಸಮನ್ವಯ ಮಂಡಳಿ ರಚಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ.ಇದು ಇದು ಅಫ್ಘಾನಿಸ್ತಾನದಲ್ಲಿ ಮಾತುಕತೆ ಮತ್ತು ಶಾಂತಿಯುತ ಪರಿವರ್ತನೆಗೆ ಕಾರಣವಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.