– ಟಿ20 ವಿಶ್ವಕಪ್‌ಗೆ ರಣತಂತ್ರ ರೂಪಿಸಲು ಪಿಸಿಬಿ ಪ್ಲ್ಯಾನ್
ಇಸ್ಲಾಮಾಬಾದ್: 2011ರ ವಿಶ್ವಕಪ್ (World Cup 2011) ಗೆಲುವಿನ ವೇಳೆ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಮಾಜಿ ಮುಖ್ಯಕೋಚ್ ಗ್ಯಾರಿ ಕರ್ಸ್ಟನ್ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯಕೋಚ್ (New Head Coaches) ಆಗಿ ನೇಮಕಗೊಂಡಿದ್ದಾರೆ.
ಭಾನುವಾರ (ಇಂದು) ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕುಟುಂಬದೊಂದಿಗೆ ವಿದ್ಯಾರ್ಥಿ ಭವನಕ್ಕೆ ಆಗಮಿಸಿ ದೋಸೆ ಸವಿದ ಕುಂಬ್ಳೆ
Advertisement
— Pakistan Cricket (@TheRealPCB) April 28, 2024
Advertisement
ಗ್ಯಾರಿ ಕರ್ಸ್ಟನ್ (Gary Kirsten) ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪಾಕ್ ತಂಡಕ್ಕೆ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಟೆಸ್ಟ್ ಕ್ರಿಕೆಟ್‌ನ ಮುಖ್ಯಕೋಚ್ ಆಗಿದ್ದು, ಪಾಕ್ ತಂಡದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸಹಾಯ ಕೋಚ್ ಆಗಿ ನೇಮಿಸಲಾಗಿದೆ. 2011ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದಿತ್ತು.
Advertisement
Advertisement
ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕರ್ಸ್ಟನ್ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಶೀಶ್ ನೆಹ್ರಾ ಅವರೊಂದಿಗೆ ಗುಜರಾತ್ ಟೈಟಾನ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದು, ಟಿ20 ವಿಶ್ವಕಪ್ ವೇಳೆಗೆ ತಂಡವನ್ನು ಅಣಿಗೊಳಿಸಲಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್!
ಅಲ್ಲದೇ ಮುಂದೆ ನಡೆಯುವ ಏಕದಿನ ಹಾಗೂ ಟಿ20 ದ್ವಿಪಕ್ಷೀಯ ಸರಣಿಗಳಿಗೆ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. 2025ಕ್ಕೆ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ-2025, 2025ರ ಐಸಿಸಿ ಟಿ20 ಏಷ್ಯಾಕಪ್, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗಳಿಗೆ ಪಾಕ್ ತಂಡದ ಮುಖ್ಯಕೋಚ್ ಆಗಿ ಗ್ಯಾರಿ ಕೆಲಸ ಮಾಡಲಿದ್ದಾರೆ ಎಂದು ಪಿಸಿಬಿ ಹೇಳಿದೆ.
WTCಗೆ ತಯಾರಿ ಮಾಡುವ ಹೊಣೆ:
2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಪಾಕ್ ತಂಡವನ್ನು ಅಣಿಗೊಳಿಸುವ ಜವಾಬ್ದಾರಿಯೂ ಗ್ಯಾರಿ ಅವರ ಹೆಗಲಿಗಿದೆ. ಜೊತೆಗೆ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ, ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟೆಸ್ಟ್ ಪಂದ್ಯಗಳಿಗೂ ಪಾಕ್ ತಂಡವನ್ನು ಮುನ್ನಡೆಸಲಿದ್ದಾರೆ ಮಂಡಳಿ ಹೇಳಿದೆ.