ಇಸ್ಲಾಮಾಬಾದ್: ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್ ದರವನ್ನು (Electricity Price) ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ ಅಡಿಯಲ್ಲಿ ಪಾಕಿಸ್ತಾನವು (Pakistan) ಪ್ರತಿ ಯೂನಿಟ್‌ಗೆ 1.42 ರೂ.ಗಳಷ್ಟು ವಿದ್ಯುತ್ ದರವನ್ನು ಹೆಚ್ಚಿಸಿದೆ.
ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (NEPRA), ಫೆಬ್ರವರಿ 2026 ರ ಇಂಧನ ಶುಲ್ಕಗಳಲ್ಲಿನ ವ್ಯತ್ಯಾಸವನ್ನು ಉಲ್ಲೇಖಿಸಿದೆ. ವಿದ್ಯುತ್ ಸುಂಕವನ್ನು ಹೆಚ್ಚಿಸುವ ಮೂಲಕ ದೇಶದ ಗ್ರಾಹಕರಿಗೆ ದೊಡ್ಡ ಆಘಾತವನ್ನು ನೀಡಿದೆ. ಇದನ್ನೂ ಓದಿ: ಹೆಜ್ಬೊಲ್ಲಾ ಭದ್ರಕೋಟೆ ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ – 11 ಮಂದಿ ಸಾವು
ಸದ್ಯಕ್ಕೆ ಜಾಗತಿಕ ಇಂಧನ ಭವಿಷ್ಯವು ಅಸ್ಪಷ್ಟವಾಗಿಯೇ ಉಳಿದಿದೆ. ಹೀಗಾಗಿ, ಈ ತಿಂಗಳು ಪಾಕಿಸ್ತಾನಿಗಳು ಇಂಧನ ಮತ್ತು ವಿದ್ಯುತ್‌ಗಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ದೇಶದ ಸಂಕಷ್ಟದಲ್ಲಿರುವ ಉದ್ಯಮದ ಮೇಲೂ ಇದರ ಪರಿಣಾಮ ಉಂಟಾಗಲಿದೆ.
ಪಾಕಿಸ್ತಾನ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಪಿಸಿಸಿಐ) ಪ್ರತಿನಿಧಿಯೊಬ್ಬರು, ಕಳೆದ ಮೂರು ವರ್ಷಗಳಲ್ಲಿ ಕೈಗಾರಿಕಾ ವಲಯವು ಈಗಾಗಲೇ 564.7 ಶತಕೋಟಿ ರೂಪಾಯಿಗಳ ಒಟ್ಟು ಹೊರೆಯನ್ನು ಭರಿಸಿದೆ. ಮತ್ತಷ್ಟು ಹೆಚ್ಚಳವು ಸುಸ್ಥಿರತೆ ಮತ್ತು ಕೈಗಾರಿಕಾ ಕಾರ್ಯಸಾಧ್ಯತೆಗೆ ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲ: ಇರಾನ್ ಬೇಸರ
ಪಾಕಿಸ್ತಾನದ ವಿದ್ಯುತ್ ಸಮಸ್ಯೆ ಮಧ್ಯಪ್ರಾಚ್ಯದ ಪ್ರಕ್ಷುಬ್ಧತೆಗಿಂತ ಬಹಳ ಹಿಂದಿನಿಂದಲೂ ಇದೆ. 2024-25ನೇ ಹಣಕಾಸು ವರ್ಷದಲ್ಲಿ, ಪ್ರಸರಣ ಮತ್ತು ವಿತರಣಾ ನಷ್ಟಗಳು ಮತ್ತು ಅಸಮರ್ಪಕ ಬಿಲ್ ವಸೂಲಿಗಳಿಂದಾಗಿ ಪಾಕಿಸ್ತಾನದ ವಿದ್ಯುತ್ ವಿತರಣಾ ವಲಯವು ಒಟ್ಟಾರೆಯಾಗಿ 397 ಶತಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡಿದೆ.

