ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ದಿನೇ ದಿನೇ ಪರಿಸ್ಥಿತಿ ಕ್ಷೀಣಿಸುತ್ತಿದೆ. ಇದರಿಂದ ಜನಸಾಮಾನ್ಯರೂ ಪರದಾಡುವಂತಾಗಿದೆ. ಇದೀಗ ನೆರೆಯ ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಎದುರಾಗುತ್ತಿದೆ.
ಆದಾಯದ ಬಹುಪಾಲನ್ನು ಸೇನೆಗೆ ಖರ್ಚು ಮಾಡುವ ಪಾಕಿಸ್ತಾನದಲ್ಲಿ ಇದೀಗ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಖಾದ್ಯ ತೈಲ, ತುಪ್ಪ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.
Advertisement
Advertisement
ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಖಾದ್ಯ ತೈಲ ಬೆಲೆ ಗಗನಕ್ಕೇರಿದೆ. ಖಾದ್ಯ ತೈಲ ಒಂದೇ ಸಮನೇ 208 ರೂಪಾಯಿ ಹಾಗೂ ತುಪ್ಪದ ಬೆಲೆ ಪ್ರತಿ ಕೆಜಿಗೆ 213 ರೂಪಾಯಿ ಹೆಚ್ಚಾಗಿದೆ. ಇದರಿಂದ ಖಾದ್ಯ ತೈಲ 1 ಕೆಜಿಗೆ 555 ರೂಪಾಯಿ ಆಗಿದ್ದರೆ, 1 ಕೆಜಿ ತುಪ್ಪದ ಬೆಲೆ 605 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 540 ರೂಪಾಯಿ ಇದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯ ಸರಿದೂಗಿಸಲು ಆಮದು ಮೇಲೆ ನಿರ್ಬಂಧ ಹೇರಿದೆ. ಆದರೂ ಪರಿಸ್ಥಿತಿ ಹದಗೆಡುತ್ತಿದೆ.
Advertisement
Advertisement
ಇಂಡೋನೇಷಿಯಾದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಖಾದ್ಯ ತೈಲ ಹಾಗೂ ತುಪ್ಪದ ಬೆಲೆ ಶೇ.300 ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ
ಪಾಕ್ ರೂಪಾಯಿ ಬೆಲೆ ಪಾತಾಳಕ್ಕೆ: ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಪಾಕ್‌ನಲ್ಲಿ ರೂಪಾಯಿಯ ಮೌಲ್ಯ ದಾಖಲೆ ಪ್ರಮಾಣದ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆ ಪಾಕಿಸ್ತಾನ ಪ್ಯಾಕೇಜ್ ಮಾತುಕತೆ ನಡೆಸುತ್ತಿದೆ. ಇದರ ನಡುವೆ ರೂಪಾಯಿ ಶೇ.7 ರಷ್ಟು ಕುಸಿತವಾಗಿದೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!
ಆರ್ಥಿಕ ಬಿಕ್ಕಟ್ಟು, ವಿದೇಶಿ ಸಾಲ, ವಿದೇಶಿ ವಿನಿಮಯ ಕೊರತೆ, ರೂಪಾಯಿ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಪಾಕಿಸ್ತಾನ ಎದುರಿಸುತ್ತಿದೆ. ಇದರ ನಡುವೆ ಮುಂದಿನ ಹಣಕಾಸು ವರ್ಷದಲ್ಲಿ ಅಮೆರಿದಿಂದ ಪಡೆದಿರುವ 21 ಶತಕೋಟಿ ವಿದೇಶಿ ಸಾಲ ಮರುಪಾವತಿಸಬೇಕಿದೆ. ವಿದೇಶಿ ವಿನಿಮಯ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ತಲೆ ಮೇಲೆ ಕೈಹೊತ್ತು ಕೂತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆ ಸಾಲಕ್ಕೆ ಮಾತುಕತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.