– ಭಾರತೀಯ ವಾಯುನೆಲೆಗಳು ಸುರಕ್ಷಿತ
– ನಮ್ಮ ಪ್ರತಿದಾಳಿಯಿಂದ ಪಾಕ್ ಸೇನೆಗೆ ಅಪಾರ ನಷ್ಟ: ಕರ್ನಲ್ ಸೋಫಿಯಾ
ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪ ಮಾಡಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ(Sofiya Qureshi) ಹೇಳಿದ್ದಾರೆ.
ಶನಿವಾರ ಭಾರತ(India) ಹಾಗೂ ಪಾಕಿಸ್ತಾನದ(Pakistan) ನಡುವಿನ ಕದನ ವಿರಾಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್400 ಕ್ಷಿಪಣಿ, ಬ್ರಹ್ಮೋಸ್ ನೆಲೆ ನಾಶವಾಗಿಲ್ಲ. ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪಗಳನ್ನ ಮಾಡ್ತಿದೆ. ಚಂಡೀಗಢದಲ್ಲಿ ಪಾಕ್ ಶೆಲ್ ಮೇಲೆ ದಾಳಿ ಮಾಡಿರೋದು ಸುಳ್ಳು ಸುದ್ದಿಯಾಗಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನ ಹೊಡೆದುರುಳಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್ ಒಪ್ಪಂದ: ಜೈಶಂಕರ್
ಭಾರತೀಯ ಸೇನೆಯು(Indian Army) ಕೇವಲ ಪಾಕ್‌ನ ಸೇನಾವಲಯಗಳನ್ನ ಮಾತ್ರ ಗುರಿ ಮಾಡಿ ದಾಳಿ ಮಾಡಿದೆ. ಪಾಕಿಸ್ತಾನ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದೆ. ನಮ್ಮ ದಾಳಿಯಿಂದ ಪಾಕಿಸ್ತಾನ ಸೇನೆಗೆ ಸಾಕಷ್ಟು ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ
ಭಾರತೀಯ ಸೇನೆಯು ಪಾಕಿಸ್ತಾನದ ಯಾವುದೇ ಮಸೀದಿಗಳನ್ನ ಟಾರ್ಗೆಟ್ ಮಾಡಿಲ್ಲ. ಕೇವಲ ಪಾಕ್ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದೇವೆ. ಪಾಕಿಸ್ತಾನ ಏರ್‌ಬೇಸ್‌ಗಳನ್ನ ಹೊಡೆದುರುಳಿಸಿದ್ದೇವೆ. ಎಲ್‌ಓಸಿಯಲ್ಲಿಯೂ ಪಾಕಿಸ್ತಾನ ಗುಂಡಿನ ದಾಳಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಭಾರತ ದಾಳಿ ಮಾಡಿದ ವೇಳೆ ಅವರಿಗೂ ನಷ್ಟವಾಗಿದೆ. ಎಲ್ಲಾ ಸಮಯದಲ್ಲೂ ನಮ್ಮ ಸೇನೆ ಅಲರ್ಟ್ ಇರಲಿದೆ. ಪಾಕ್ ದಾಳಿಗೆ ಪ್ರತಿದಾಳಿ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.