ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ಯುದ್ಧ ಮಾಡಲು ಸನ್ನದ್ಧವಾಗಿದ್ದು, ನಮ್ಮ ನೆಲ, ವಾಯು, ಜಲಮಾರ್ಗವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ವಿಶ್ವದ ಇತರೇ ರಾಷ್ಟ್ರಗಳಿಗೆ ಪಾಕ್ ತೊರಿಸಲು ದೂರು ನೀಡಲು ಮುಂದಾಗಿದೆ.
ಭಾರತದ ಯುದ್ಧ ನೌಕೆಗಳು ಕರಾಚಿ ಭಾಗದತ್ತ ಬರುತ್ತಿದೆ. ಇದರಿಂದ ನಮಗೇ ಆತಂಕ ಸೃಷ್ಟಿಯಾಗಿದೆ ಎಂದು ಪಾಕ್ ಹೇಳಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಈಗಾಗಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಗಡಿ ಪ್ರದೇಶಗಳಿಗೆ ಯುದ್ಧ ಟ್ಯಾಂಕರ್ ಗಳನ್ನು ರವಾನೆ ಮಾಡಿರುವ ಪಾಕಿಸ್ತಾನ, ಗಡಿ ಭಾಗದ ಗ್ರಾಮಗಳ ಜನರನ್ನು ಖಾಲಿ ಮಾಡುವ ಕಾರ್ಯವನ್ನು ಬುಧವಾರವೇ ಮಾಡಿದೆ. ಆದರೆ ಇತರೇ ದೇಶಗಳ ಎದುರು ತಾನು ಏನು ಮಾಡುತ್ತಿಲ್ಲ. ಭಾರತವೇ ನಮ್ಮನ್ನು ಸುತ್ತುವರಿದು ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ ಎಂದು ಎಂದು ತಿಳಿಸಲು ಮುಂದಾಗಿದೆ.
Advertisement
ಕಳೆದ ಮೂರು ದಿನಗಳಿಂದಲೂ ಕೂಡ ಭಾರತ ಗಡಿ ಪ್ರದೇಶಗಳಲ್ಲಿ ಪದೇ ಪದೇ ದಾಳಿ ನಡೆಸುತ್ತಿದ್ದರು ಕೂಡ ಏನು ಗೊತ್ತಿಲ್ಲ ಎಂಬಂತೆ ನಾಟಕ ಮಾಡಲು ಶುರು ಮಾಡಿದೆ. ತನ್ನ ಸುಳ್ಳಿನ ನಾಟಕವನ್ನು ಜಗತ್ತಿಗೆ ಸತ್ಯ ಎಂದು ತಿಳಿಸಲು ಬೇಕಾದ ಸಿದ್ಧತೆಯನ್ನು ಪಾಕಿಸ್ತಾನ ಮಾಡಿಕೊಂಡಿದೆ.
Advertisement
ಪಾಕಿಸ್ತಾನ ಈಗಾಗಲೇ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನು ಕಡಿತ ಮಾಡಿದೆ. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿದೆ. ಹೀಗಾಗಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವದ ಮುಂದೆ ದೂರು ನೀಡಲು ಮುಂದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv