ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್ ಕದನದಲ್ಲಿ ಭಾರತ (India) ಹೀನಾಯವಾಗಿ ಸೋತು ಎರಡು ದಿನ ಕಳೆದರೂ ಅಭಿಮಾನಿಗಳಿಗೆ ಮಾತ್ರ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ.
Advertisement
ಟೀಂ ಇಂಡಿಯಾ (Team India) ಎದುರಾಳಿಗಳಿಗಳು ಭಾರತದ ಸೋಲನ್ನು ಸಂಭ್ರಮಿಸುತ್ತಿದ್ದರೆ, ತಜ್ಞರು ಇದಕ್ಕೆ ಕಾರಣಗಳನ್ನು ಹುಡುಕಿದ್ದಾರೆ. ಈ ನಡುವೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಗರು (Cricketer) ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲಿ ಐಪಿಎಲ್ (IPL) ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ
Advertisement
Advertisement
ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಶೋಯೆಬ್ ಮಲಿಕ್ (Shoaib Malik), ವಕಾರ್ ಯೂನಿಸ್ ಮೊದಲಾದವರು ಟೀಂ ಇಂಡಿಯಾ ಸೆಮಿಫೈನಲ್ ಸೋಲಿಗೆ ಕಾರಣಗಳನ್ನ ವಿಶ್ಲೇಷಣೆ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲೇ ಟೀಂ ಇಂಡಿಯಾ ಕೊನೆಯದಾಗಿ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಮರು ವರ್ಷದಲ್ಲಿ ಅಂದರೆ 2008 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಯಿತು. ಅಂದಿನಿಂದಲೂ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2011ರಲ್ಲಿ ಮಾತ್ರ ಏಕದಿನ ವಿಶ್ವಕಪ್ ಗೆದ್ದಿತು. ಆಗ ಎಂ.ಎಸ್.ಧೋನಿ (MS Dhoni) ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದರು ಎಂದು ಹೇಳಿದ್ದಾರೆ.
Advertisement
ಭಾರತ ಮತ್ತು ಇತರ ತಂಡಗಳ ನಡುವೆ ದೊಡ್ಡ ವ್ಯತ್ಯಾಸವೆಂದರೆ ಅದು ಐಪಿಎಲ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಐಪಿಎಲ್ ಆರಂಭವಾದ ನಂತರ ಟಿಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್ ಶರ್ಮಾ
ಇದೇ ಸಂದರ್ಭದಲ್ಲಿ ಐಪಿಎಲ್ ಜೊತೆಗೆ ಹೆಚ್ಚುವರಿ ಫ್ಯಾಂಚೈಸಿ ಲೀಗ್ ಆಡುವುದು ಭಾರತಕ್ಕೆ ಸಹಾಯ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಯೆಬ್ ಮಲ್ಲಿಕ್, ಖಂಡಿತಾ ಹೌದು. ಯುವ ಆಟಗಾರರಿಗೆ ಮಾನ್ಯತೆ ಪಡೆಯಲು ಐಪಿಎಲ್ ಒಂದು ದೊಡ್ಡ ವೇದಿಕೆ. ಈ ಲೀಗ್‌ಗಳು ಆಟಗಾರರಿಗೆ ಪರಿಸ್ಥಿತಿಗಳನ್ನು ಹೆಚ್ಚು ನಿಖರವಾಗಿ ನಿರ್ಣಯಿಸಲು ಸಹಾಯ ಮಾಡುತ್ತವೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ವ್ಯತ್ಯಾಗಳ ಬಗ್ಗೆ ತಿಳಿಸುತ್ತದೆ. ಹೆಚ್ಚುವರಿ ಜವಾಬ್ದಾರಿಗಳು, ನಿಮ್ಮ ಪ್ರದರ್ಶನ ಹೇಗಿರಬೇಕು ಅನ್ನೋ ಮಾರ್ಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿಶ್ವವಿಖ್ಯಾತಿ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಾರೆ. ಈ ಎಲ್ಲ ಪಾಠಗಳು ಐಪಿಎಲ್ ಕಲಿಸುತ್ತದೆ ಎಂದು ಮಲಿಕ್ ಸಲಹೆ ನೀಡಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾಯಿತು. ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಬಹುಪಾಲು ತಂಡಗಳಿಗೆ ಟೀಂ ಇಂಡಿಯಾ ಆಟಗಾರರೇ ನಾಯಕರಾಗಿದ್ದರು.