ನವದೆಹಲಿ: ಪಾಕಿಸ್ತಾನ (Pakistan) ಸರ್ಕಾರದ ಟ್ವಿಟ್ಟರ್ (Twitter) ಖಾತೆಯನ್ನು ಭಾರತ ನಿರ್ಬಂಧಿಸಿದೆ. ಎರಡನೇ ಬಾರಿಗೆ ಭಾರತ (India) ಸರ್ಕಾರದ ಮನವಿ ಮೇರೆಗೆ ಪಾಕ್ ಸರ್ಕಾರದ ಖಾತೆಯನ್ನು ನಿರ್ಬಂಧಿಸಲಾಗಿದೆ.
ಪಾಕಿಸ್ತಾನ ಸರ್ಕಾರದ ಖಾತೆಯನ್ನು ಈ ಹಿಂದೆ ಜುಲೈನಲ್ಲಿ ತಡೆಹಿಡಿಯಲಾಗಿತ್ತು. ಅದಾದ ಬಳಿಕ ನಿರ್ಬಂಧವನ್ನು ತೆಗೆಯಲಾಗಿತ್ತು. ಆದರೆ ಇದೀಗ ಕಾನೂನು ಬೇಡಿಕೆಗೆ ಅನುಗುಣವಾಗಿ ಮತ್ತೆ ತಡೆಹಿಡಿಯಲಾಗಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ ಭಾರತೀಯರಿಗೆ ಕಾಣಿಸುವುದಿಲ್ಲ. ಇದನ್ನೂ ಓದಿ: ಹಳ್ಳದಲ್ಲಿ ಸಿಲುಕಿದ್ದ ಟ್ರಕ್ ಎಳೆದ ಟ್ರ್ಯಾಕ್ಟರ್
Advertisement
Advertisement
ಈ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ 6 ಪಾಕಿಸ್ತಾನ ಮೂಲದ ಚಾನೆಲ್‌ಗಳು ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿತ್ತು. ಇದನ್ನೂ ಓದಿ: ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ