ಇಸ್ಲಾಮಾಬಾದ್: ಶ್ರೀಲಂಕಾ (SriLanka) ಹಾದಿಯಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಿಂದ (Pakistan) ಮತ್ತೊಂದು ಭ್ರಷ್ಟಾಚಾರದ ಮಾಹಿತಿ ಬೆಳಕಿಗೆ ಬಂದಿದೆ.
ಜಲಪ್ರಳಯದಿಂದ ಜನರನ್ನು ರಕ್ಷಿಸಲು ಸಿಂಧೂನದಿಗೆ (Indus River) ಅಡ್ಡಲಾಗಿ ಡ್ಯಾಮ್ (Dam) ನಿರ್ಮಾಣ ಮಾಡಲು ಉದ್ದೇಶಿಸಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಡ್ಯಾಮ್ ಪಾಕ್ ಸರ್ಕಾರ (Pakistan Government) ಡ್ಯಾಮ್ ನಿರ್ಮಾಣಕ್ಕೆ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಜಾಹೀರಾತಿಗೆ (Advertising) ವಿನಿಯೋಗಿಸಿದೆ ಎಂಬ ಅಚ್ಚರಿ ಮಾಹಿತಿ ಪಾಕಿಸ್ತಾನದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ
Advertisement
Advertisement
ಪಾಕಿಸ್ತಾನದ ಪಾರ್ಲಿಮೆಂಟರಿ ಲೆಕ್ಕಪತ್ರ ಸಮಿತಿ (PAC) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಸಿಂಧೂ ನದಿಗೆ ಅಡ್ಡಲಾಗಿ ಡ್ಯಾಮ್ ನಿರ್ಮಿಸುವುದಕ್ಕೆ ಸುಮಾರು 40 ಮಿಲಿಯನ್ ಡಾಲರ್ ಅಂದರೆ 319 ಕೋಟಿ ರೂಪಾಯಿ ಜನರಿಂದ ಸಂಗ್ರಹ ಮಾಡಿದೆ. ಆದರೆ ಸರ್ಕಾರ ಜಾಹೀರಾತಿಗೆ (Advertising) ಬರೋಬ್ಬರಿ 63 ಮಿಲಿಯನ್ ಡಾಲರ್ ಅಂದರೆ ಸುಮಾರು 500 ಕೋಟಿ ರೂ.ಗಳಷ್ಟು ಖರ್ಚು ಮಾಡಿದೆ ಎಂದು ಹೇಳಿದೆ. ಇನ್ನೊಂದೆಡೆ ತಜ್ಞರು ಪಾಕ್‌ನಲ್ಲಿ ಎದುರಾಗಿರೋ ಭೀಕರ ಪ್ರವಾಹಕ್ಕೆ ಹವಾಮಾನ ಬದಲಾವಣೆಯೇ ಅತಿಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
1980ರ ದಶಕದಲ್ಲಿ ಅಣೆಕಟ್ಟು ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಪರಿಸರದ ಮೇಲಿನ ಪ್ರಭಾವ ಹಾಗೂ ಅಣೆಕಟ್ಟು ನಿರ್ಮಾಣದ ವೆಚ್ಚ ಹೆಚ್ಚುತ್ತಾ ಹೋದಂತೆ ಅಣೆಕಟ್ಟು ಪೂರ್ಣಗೊಳಿಸುವ ಯೋಜನೆ ವಿಳಂಬವಾಗುತ್ತಲೇ ಹೋಯಿತು. 2018ರಲ್ಲಿ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ (CJP) ಸಾಕಿಬ್ ನಿಸಾರ್ ಅವರು ಅಣೆಕಟ್ಟು ನಿರ್ಮಾಣಕ್ಕಾಗಿ 14 ಮಿಲಿಯನ್ ಡಾಲರ್‌ನಷ್ಟು ವೆಚ್ಚ ನಿಗದಿಗೊಳಿಸಿದ್ದರು. ಅದಕ್ಕಾಗಿ ನಿಸಾರ್ ಅವರು ಪಾಕ್ ಪ್ರಜೆಗಳಿಂದ ದೇಣಿಗೆ ಸಂಗ್ರಹಿಸಲು ಪ್ರತ್ಯೇಕ ನಿಧಿಯನ್ನೂ ಸ್ಥಾಪಿಸಿದರು. ಇದನ್ನೂ ಓದಿ: ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ
ಸಾರ್ವಜನಿಕರಿಂದ ಮಾತ್ರವಲ್ಲದೆ ದೇಶದ ಕ್ರಿಕೆಟ್ ತಂಡ (Cricket Team), ಖ್ಯಾತ ಸಂಗೀತಗಾರರೂ ಸಹ ಕೊಡುಗೆ ನೀಡಲು ಆರಂಭಿಸಿದರು. ಪಾಕ್ ಸೈನಿಕರು ಸೇರಿದಂತೆ ಹಲವಾರು ಸರ್ಕಾರಿ ನೌಕರರು ತಮ್ಮ ವೇತನದ ಒಂದು ಭಾಗ (ಸುಮಾರು 100 ಶತಕೋಟಿ ಡಾಲರ್) ನೀಡಲು ನೀಡಿದ್ದರು. ಆಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ನಿಧಿ ಸ್ಥಾಪನೆಯ ಜಂಟಿ ನಾಯಕತ್ವ ವಹಿಸಿದ್ದರು.
ನಿಸಾರ್ ಅವರು 2019ರಲ್ಲಿ ನಿವೃತ್ತಿಯಾದಾಗ 6.3 ಶತಕೋಟಿ ಡಾಲರ್‌ಗಳ ಕೊರತೆಯಿತ್ತು. ಆದರೆ ಅವರ ಇತ್ತೀಚಿನ ಹೇಳಿಕೆಯು ಜನರಲ್ಲಿ ಕಳವಳವನ್ನುಂಟುಮಾಡಿದೆ. ಅಂದು ಸ್ಥಾಪಿತವಾದ ನಿಧಿ ಅಣೆಕಟ್ಟು ನಿರ್ಮಿಸಲು ಉದ್ದೇಶಿದಿಲ್ಲ. ಬದಲಾಗಿ ಜಾಗೃತಿ ಮೂಡಿಸಲು ಹೇಳಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು
ಈ ಬೆನ್ನಲ್ಲೇ ಪಾಕಿಸ್ತಾನದ ಪಾರ್ಲಿಮೆಂಟರಿ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಅಹ್ಸಾನ್ ಇಕ್ಬಾಲ್, ಅಣೆಕಟ್ಟು ನಿಧಿಗೆ ಸಂಗ್ರಹಿಸಿದ್ದ ದೇಣಿಗೆಗಿಂತ ಹೆಚ್ಚಿನ ಹಣವನ್ನು ಜಾಹೀರಾತಿಗೆ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
272 ಮೀಟರ್ ಎತ್ತರ ಇರುವ ಡೈಮರ್-ಭಾಷಾ ಅಣೆಕಟ್ಟು 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ಸಮಿತಿ ಸಭೆಯಲ್ಲಿ ಹೇಳಿದೆ.