ಗಯಾನ: ಮಹಿಳೆಯರ ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸುವ ಮೊದಲೇ 10 ರನ್ ಗಳಿಸಿದ ಅಚ್ಚರಿಯ ಘಟನೆ ನಡೆದಿದೆ.
ವಿಶ್ವಕಪ್ ಟೂರ್ನಿಯ ಭಾನುವಾರ ಇಂಡೋ ಪಾಕ್ ಪಂದ್ಯದಲ್ಲಿ ಅಚ್ಚರಿಯ ಘಟನೆ ನಡೆದಿದ್ದು, ಪಾಕಿಸ್ತಾನದ ತಂಡದ ಮಹಿಳಾ ಆಟಗಾರ್ತಿಯರು ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಸುಲಭ ಜಯ ಪಡೆದಿತ್ತು.
https://twitter.com/NaaginDance/status/1061914194981773312
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಗುರಿ ನೀಡಿತ್ತು. ಆದರೆ ಇನ್ನಿಂಗ್ಸ್ ವೇಳೆ ಪಿಚ್ ಡೇಂಜರ್ ಜೋನ್ ಪ್ರದೇಶದಲ್ಲಿ ಪದೇ ಪದೇ ರನ್ ಓಡುವ ಮೂಲಕ 10 ರನ್ ದಂಡ ಪಡೆದಿದ್ದಾರೆ. ಅಲ್ಲದೇ ಪಾಕ್ ಆಟಗಾರ್ತಿಯರು ಗಳಿಸಿದ್ದ 2 ರನ್ ಕೂಡ ಅವರಿಗೆ ಸಿಗಲಿಲ್ಲ. ಇದಕ್ಕೂ ಮುನ್ನ ಆನ್‍ಫೀಲ್ಡ್ ಅಂಪೈರ್ ಎರಡು ಬಾರಿ ಆಟಗಾರ್ತಿಯರಿಗೆ ಎಚ್ಚರಿಕೆ ನೀಡಿದ ಬಳಿಕವೂ ಎಚ್ಚೆತ್ತು ಕೊಳ್ಳದ ಕಾರಣ ಟೀಂ ಇಂಡಿಯಾಗೆ ಲಾಭವಾಯಿತು.
ಪಾಕಿಸ್ತಾನದ ಆಟಗಾರ್ತಿಯರು ತಮ್ಮ ಆಶಿಸ್ತಿಗೆ ಸೂಕ್ತ ದಂಡ ತೆತ್ತಿದ್ದು, ಪಂದ್ಯದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕಿ ಜವೆರಿಯಾ ಖಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ಪಾಕಿಸ್ತಾನ ತಂಡದ ಆಟಗಾರ್ತಿಯರು ಇಂತಹದ್ದೇ ತಪ್ಪು ಮಾಡಿದ್ದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇದೇ ರೀತಿ ಆಶಿಸ್ತಿನ ವರ್ತನೆ ತೋರಿದ್ದರು.
ವಿಶ್ವಕಪ್ ಟೂರ್ನಿಯ 8 ಗ್ರೂಪ್ ನಲ್ಲಿರುವ ಟೀಂ ಇಂಡಿಯಾ ಆಡಿರುವ 2 ಪಂದ್ಯಗಳಲ್ಲಿ ಜಯ ಸಾಧಿಸಿ ಮೊದಲ ಸ್ಥಾನದಲ್ಲಿದೆ. ಟೀಂ ಇಂಡಿಯಾ ಟೂರ್ನಿಯಲ್ಲಿ ಮುಂದಿನ ಪಂದ್ಯವನ್ನು ಐರ್ಲೆಂಡ್ ತಂಡದ ವಿರುದ್ಧ ಮಂಗಳವಾರ ಆಡಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews