ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

Public TV
1 Min Read
IMRAN KHAN

ಇಸ್ಲಾಮಾಬಾದ್: ಅಧಿಕಾರದಲ್ಲಿದ್ದಾಗ ನಾನು ಅಪಾಯಕಾರಿ ಆಗಿರಲಿಲ್ಲ. ಆದರೆ ಈಗ ನಾನು ಅಪಾಯಕಾರಿಯಾಗಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

ಪಾಕಿಸ್ತಾನದ ಪೇಶಾವರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ತನ್ನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೊದಲು ಮಧ್ಯರಾತ್ರಿಯಲ್ಲಿ ನ್ಯಾಯಾಲಯಗಳನ್ನು ಏಕೆ ತೆರೆಯಲಾಯಿತು, ನಾನು ಯಾವುದಾದರೂ ಕಾನೂನು ಉಲಂಘಿಸಿದ್ದೇನೆಯೇ ಎಂದು ಪ್ರಶ್ನಿಸಿದ ಅವರು, ನ್ಯಾಯಾಗವು ಸ್ವತಂತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

IMRAN KHAN 2

ದೇಶದಲ್ಲಿ ಪ್ರತಿ ಬಾರಿ ನಾಯಕರನ್ನು ಪದಚ್ಯುತಗೊಳಿಸಿದಾಗ ಜನರು ಸಂಭ್ರಮಾಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬೃಹತ್ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

Shehbaz Sharif 1

ಪಾಕಿಸ್ತಾನದಲ್ಲಿ ತನ್ನ ಸರ್ಕಾರವನ್ನು ತೆಗೆದುಹಾಕುವಲ್ಲಿ ವಿದೇಶಿ ರಾಷ್ಟ್ರಗಳು ಭಾಗಿಯಾಗಿದ್ದು, ಅಮೆರಿಕವು ಈ ಡಕಾಯಿತರನ್ನು (ಹೊಸ ಸರ್ಕಾರ) ನಮ್ಮ ಮೇಲೆ ಹೇರುವ ಮೂಲಕ ಪಾಕಿಸ್ತಾನವನ್ನು ಅವಮಾನಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

Share This Article