ಇಸ್ಲಾಮಾಬಾದ್: ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭೂ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ 14 ವರ್ಷ ಜೈಲು ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆಯಾಗಿದೆ.
ಇಮ್ರಾನ್ ಖಾನ್ ಮೇಲಿದ್ದ ಆರೋಪ ಸಾಬೀತಾದ ಬೆನ್ನಲ್ಲೇ ಇಂದು ರಾವಲ್ಪಿಂಡಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿತು.
Advertisement
ನ್ಯಾಯಾಧೀಶರು ಅಡಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದರು. ಇಮ್ರಾನ್ ಖಾನ್ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಶ್ವೇತಭವನದ ಮೇಲೆ ದಾಳಿ – ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು
Advertisement
Advertisement
ಏನಿದು ಅಲ್-ಖಾದಿರ್ ಟ್ರಸ್ಟ್ ಕೇಸ್?
ಇಮ್ರಾನ್ ಖಾನ್ನ್ನು ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಪಂಜಾಬ್‌ನ ಝೀಲಂನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಇಮ್ರಾನ್ ಖಾನ್ ಭರವಸೆ ನೀಡಿದ್ದರು.
Advertisement
ಈ ಭರವಸೆಯ ಭಾಗವಾಗಿ ಖಾನ್ ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಸ್ಥಾಪಿಸಿದ್ದರು. ಅದರಲ್ಲಿ ಬೀಬಿ, ಆಪ್ತ ಸಹಾಯಕರಾಗಿದ್ದ ಬುಖಾರಿ ಮತ್ತು ಬಾಬರ್ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಗಿತ್ತು. ಈ ಸಂಬಂಧ ಆಗಿನ ಪಿಟಿಐ ಸರ್ಕಾರ ಮತ್ತು ಆಸ್ತಿ ಉದ್ಯಮಿ ನಡುವೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಿಂದ ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳ ನಷ್ಟವಾಗಿದೆ. ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು 458 ಎಕರೆಗೂ ಹೆಚ್ಚು ಭೂಮಿ ಪಡೆದು ಲಾಭವನ್ನು ಪಡೆದ ಆರೋಪ ಇಮ್ರಾನ್ ಖಾನ್ ಮೇಲಿದೆ.