– ಕೊಹ್ಲಿ ಕಳಪೆ ಫಾರ್ಮ್ ಸಮರ್ಥಿಸಿಕೊಂಡ ಇಂಜಮಾಮ್
ಇಸ್ಲಾಮಾಬಾದ್: ನ್ಯೂಜಿಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಇದೇ ಸಮಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ 44 ರನ್ ಬಾರಿಸಿದ್ದರು. ಹೀಗಾಗಿ ಕೆಲ ನೆಟ್ಟಿಗರು ಹಾಗೂ ಹಿರಿಯ ಆಟಗಾರರು ವಿರಾಟ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವಾಗಿ ಮಾತನಾಡಿದ ವಿಡಿಯೋವನ್ನು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ತಂತ್ರದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಇಂಜಮಾಮ್ ಹೇಳಿದ್ದಾರೆ. ಇದನ್ನೂ ಓದಿ: ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ
Advertisement
Advertisement
‘ಕ್ರಿಕೆಟ್ ಅಭಿಮಾನಿಗಳು ಯಾಕೆ ವಿರಾಟ್ ಅವರ ತಂತ್ರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗಿದೆ. ಅವರು ಇದೇ ತಂತ್ರದಲ್ಲಿ 70 ಶತಕಗಳನ್ನು ಗಳಿಸಿದ್ದಾರೆ ಎಂಬುದನ್ನು ನೀವು ಮರೆತಿದ್ದೀರಾ? ಕೊಹ್ಲಿ ಬಗ್ಗೆ ಏನೆಲ್ಲ ಮಾತನಾಡುತ್ತಿರುವಿರಿ. ಕಳಪೆ ಫಾರ್ಮ್ ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದಲ್ಲೂ ಬರುತ್ತದೆ. ಆಗ ಆ ಆಟಗಾರ ತನ್ನೊಂದಿಗೆ ಹೋರಾಡುತ್ತಾನೆ. ವಿರಾಟ್ ಮೊದಲಿಗಿಂತ ಹೆಚ್ಚು ರನ್ ಗಳಿಸುತ್ತಿದ್ದಾರೆ ಎಂಬ ವಿಚಾರವನ್ನು ನಾನು ಖಾತರಿಪಡಿಸುತ್ತೇನೆ. ಮೊಹಮ್ಮದ್ ಯೂಸುಫ್ ಅವರ ವಿಷಯದಲ್ಲೂ ಇದೇ ಆಯಿತು. ಅವರು ನನ್ನ ಬಳಿಗೆ ಬಂದಾಗ, ನಾನು ಏನನ್ನೂ ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಬಳಿಕ ಯೂಸುಫ್ ಅವರದ್ದೇ ತಂತ್ರದಿಂದ ಕ್ರಿಕೆಟ್‍ನಲ್ಲಿ ಮಿಂಚಿದರು ಎಂದು ಇಂಜಮಾಮ್ ನೆನೆದರು. ಇದನ್ನೂ ಓದಿ: ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಚಳಿ ಬಿಡಿಸಿದ ವಿರಾಟ್
Advertisement
Advertisement
ಇತರ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ರು?:
‘ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನ್ಯೂಜಿಲೆಂಡ್‍ನಲ್ಲಿ ಫ್ಲಾಪ್ ಆಯಿತು ಎಂದು ನಾನು ಭಾವಿಸುತ್ತೇನೆ. ಆದರೆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ದರು? ಸತ್ಯವೆಂದರೆ ಸೋಲು ಎಲ್ಲಾ ಆಟಗಾರರ ಹೊಣೆಯಾಗಿದೆ ಎಂದು ಹೇಳಿದರು.
ವಿರಾಟ್ ಅವರಿಗೆ ನನ್ನದೊಂದು ಸಲಹೆ ಇದೆ, ಚಿಂತಿಸಬೇಡಿ. ಈ ಹಂತವು ಶೀಘ್ರದಲ್ಲೇ ಹಾದುಹೋಗುತ್ತದೆ. ನಿಮ್ಮ ತಂತ್ರವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಇಂಜಮಾಮ್ ಸಲಹೆ ನೀಡಿದರು.
ಕೊಹ್ಲಿ ಅವರು ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿ ಹೊರ ಹೊಮ್ಮಲಿದ್ದಾರೆ. ಅವರು ಮಾನಸಿಕವಾಗಿ ತುಂಬಾ ಬಲಶಾಲಿ. ಸಯೀದ್ ಅನ್ವರ್ ಮತ್ತು ಸೌರವ್ ಗಂಗೂಲಿ ಆಫ್ ಸೈಡ್‍ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಕೆಲವೊಮ್ಮೆ ಬಲಗೈ ಬ್ಯಾಟ್ಸ್‍ಮನ್‍ಗಳಿಗೆ ಅವರ ಬಲವಾದ ಭಾಗವು ದೌರ್ಬಲ್ಯವಾಗುತ್ತದೆ. ಆದ್ದರಿಂದ ಹೆಚ್ಚು ಚಿಂತಿಸಬೇಡಿ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.