ಇಸ್ಲಮಾಬಾದ್: ಈ ಬಾರಿಯ ಟಿ20 ವಿಶ್ವಕಪ್‌ನಿಂದ ದೂರ ಉಳಿದ ಬಾಂಗ್ಲಾದೇಶ ತಂಡವನ್ನು ಬೆಂಬಲಿಸಿ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರದ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗ ತಂಡ ಪ್ರಕಟಿಸಿದೆ. ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ ತೀವ್ರ ನಿರ್ಬಂಧಗಳನ್ನು ವಿಧಿಸಲಾಗುವುದು ಎಂಬ ಐಸಿಸಿ ಎಚ್ಚರಿಕೆ ನೀಡಿದ ಕೆಲವೇ ಗಂಟೆಯಲ್ಲಿ ಪಾಕ್ ಈ ನಿರ್ಧಾರ ಕೈಗೊಂಡಿದೆ.

ಸಲ್ಮಾನ್ ಅಲಿ ಅಘಾ ನೇತೃತ್ವದಲ್ಲಿ 15 ಸದಸ್ಯರುಗಳ ತಂಡವನ್ನು ಪ್ರಕಟಿಸಲಾಗಿದೆ. ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ಮೊಹಮ್ಮದ್ ನಫಯ್ (wk), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್ (wk), ಸೈಮ್ ಖಾನ್ ಅಯೂಬ್, ಶಾಹಿನ್ ಅಯೂಬ್, ಶಾಹಿನ್ ಅಯೂಬ್ ಮತ್ತು ಉಸ್ಮಾನ್ ತಾರಿಕ್ ತಂಡದಲ್ಲಿದ್ದಾರೆ. ಬಾಬರ್ ಅಜಮ್, ಶಾಹೀನ್ ಅಫ್ರಿದಿ ತಂಡಕ್ಕೆ ಮರಳಿದ್ದಾರೆ ಹಾಗೂ ಹ್ಯಾರಿಸ್ ರೌಫ್ ಅವರನ್ನು ಕೈಬಿಡಲಾಗಿದೆ. ಇದನ್ನೂ ಓದಿ: NOC ಇಲ್ಲ, ಯಾವುದೇ ಟೂರ್ನಿಯಿಲ್ಲ – ಬಾಂಗ್ಲಾಗೆ ಬೆಂಬಲ ನೀಡಲು ಹೋಗಿ ಅಡಕತ್ತರಿಯಲ್ಲಿ ಸಿಲುಕಿದ ಪಾಕ್
ಬಾಂಗ್ಲಾದೇಶದ ಮನವಿಯನ್ನು ಐಸಿಸಿ ತಿರಸ್ಕರಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಟಿ20 ವಿಶ್ವಕಪ್ ಟೂರ್ನಿಯಾಡಲು ಶ್ರೀಲಂಕಾಗೆ ಆಗಮಿಸುವ ಬಗ್ಗೆ ಕ್ಯಾತೆ ತೆಗೆದಿತ್ತು. ಬಾಂಗ್ಲಾದೇಶಕ್ಕೆ ನೈತಿಕ ಬೆಂಬಲ ನೀಡಲು ವಿಶ್ವಕಪ್‌ನಿಂದಲೇ ಹಿಂದೆ ಸರಿಯುವ ಬಗ್ಗೆ ಪಾಕಿಸ್ತಾನ (Pakistan) ಚರ್ಚೆ ನಡೆಸಿತ್ತು. ಒಂದು ವೇಳೆ ಪಾಕ್ ಆಡಲು ನಿರಾಕರಿಸಿದರೆ ಐಸಿಸಿ ಪಾಕಿಸ್ತಾನಕ್ಕೆ ಹಲವು ನಿರ್ಬಂಧ ವಿಧಿಸುವ ಸಾಧ್ಯತೆಯಿತ್ತು.
ಪಾಕ್ ಪಂದ್ಯಗಳಿಂದ ಹೊರಗುಳಿದಿದ್ದರೆ ಎಲ್ಲಾ ದ್ವಿಪಕ್ಷೀಯ ಸರಣಿಗಳನ್ನು ಅಮಾನತು ಮಾಡುವ ಸಾಧ್ಯತೆ ಇತ್ತು. ಏಷ್ಯಾಕಪ್‌ನಿಂದ ಹೊರಗೆ ಇಡುವುದು. ಪಾಕಿಸ್ತಾನ ಸ್ಫೋರ್ಟ್ಸ್ ಲೀಗ್‌ನಲ್ಲಿ ಆಡಲು ತಡೆಯಲು ವಿದೇಶಿ ಆಟಗಾರಿಗೆ ಎಲ್ಲಾ ಬೋರ್ಡ್‌ಗಳು ಎನ್‌ಒಸಿ ನೀಡದೇ ಇರಲು ತೀರ್ಮಾನಿಸಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: WPL 2026: ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ – ಡೆಲ್ಲಿಗೆ 7 ವಿಕೆಟ್‌ಗಳ ಜಯ
ಪಾಕಿಸ್ತಾನದ ICC T20 ವಿಶ್ವಕಪ್ 2026 ವೇಳಾಪಟ್ಟಿ:
ಫೆಬ್ರವರಿ 7 – ಕೊಲಂಬೊ: ಪಾಕಿಸ್ತಾನ vs ನೆದರ್ಲ್ಯಾಂಡ್ಸ್
ಫೆಬ್ರವರಿ 10 – ಕೊಲಂಬೊ: ಪಾಕಿಸ್ತಾನ vs USA
ಫೆಬ್ರವರಿ 15 – ಕೊಲಂಬೊ: ಭಾರತ vs ಪಾಕಿಸ್ತಾನ
ಫೆಬ್ರವರಿ 18 – ಕೊಲಂಬೊ: ಪಾಕಿಸ್ತಾನ vs ನಮೀಬಿಯಾ

