ಪಾಕಿಸ್ತಾನ (Pakistan) ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಘಾನಿಸ್ತಾನದ (Afghanistan) ಜನರನ್ನು ಹೊರಗೆ ತಳ್ಳಲು ಆರಂಭಿಸಿದೆ. ನವೆಂಬರ್ 1ರೊಳಗೆ ತಾವಾಗಿಯೇ ಪಾಕ್ ನೆಲವನ್ನು ತೊರೆಯುವಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಇಲ್ಲವಾದರೆ ಅವರನ್ನು ಬಂಧಿಸಿ ಗಡಿಪಾರು ಮಾಡಲು ಇಲ್ಲವೇ ಹೊಡೆದು ಹಾಕುವ ಬೆದರಿಕೆಯನ್ನೂ ನಿರಾಶ್ರಿತರಿಗೆ ಪಾಕ್ ಒಡ್ಡಿದೆ.
ಅಫ್ಘಾನ್ ನಿರಾಶ್ರಿತರ ಸಂಖ್ಯೆ ಎಷ್ಟಿದೆ?
Advertisement
ವಿಶ್ವಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ ಸುಮಾರು 30 ಲಕ್ಷ ಜನ ಅಫ್ಘಾನ್ ಪ್ರಜೆಗಳು ಪಾಕ್‍ನಲ್ಲಿದ್ದಾರೆ. ಅದರಲ್ಲಿ 10 ಲಕ್ಷ ಜನ ಪಾಕ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸುಮಾರು 8.40 ಲಕ್ಷ ಜನ ಅಫ್ಘಾನ್ ದಾಖಲೆಗಳನ್ನು ಹೊಂದಿದ್ದಾರೆ. ಆದರೆ 7.75 ಲಕ್ಷ ಜನ ಯಾವ ದಾಖಲೆಯನ್ನೂ ಹೊಂದಿಲ್ಲ. ಅಲ್ಲದೇ ಸುಮಾರು 6 ಲಕ್ಷಕ್ಕೂ ಹೆಚ್ಚು ಜನ ತಾಲಿಬಾನ್ ಸರ್ಕಾರ ರಚನೆಯಾಗುವ ಮುನ್ನ ನಡೆದ ಘರ್ಷಣೆ ನಂತರ ಪಾಕ್‍ಗೆ ಬಂದಿದ್ದಾರೆ ಎಂದು ಹೇಳಿದೆ.
Advertisement
Advertisement
ಪಾಕ್‍ನ ಈ ನಿರ್ಧಾರಕ್ಕೆ ಕಾರಣವೇನು?
Advertisement
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಸುಮಾರು 2,670 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಈ ಗಡಿಯಲ್ಲಿ 2017ರ ವೇಳೆಗೆ ಪಾಕಿಸ್ತಾನ ಬೇಲಿಯನ್ನು ನಿರ್ಮಿಸಿದೆ. ಇದರಿಂದ ತೋರ್ಖಾಮ್ ಭಾಗದ ಜನ ತಮ್ಮ ಪರಸ್ಪರ ಸಂಬಂಧಿಕರ ಮನೆಗಳಿಗೆ ತೆರಳುವುದು ಎರಡೂ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ವಿಚಾರವಾಗಿ ಆಗಾಗ ಗಲಾಟೆಗಳು ನಡೆಯುತ್ತಿರುತ್ತವೆ. ಅಲ್ಲದೇ ಪಾಕಿಸ್ತಾನದಲ್ಲಿ ಈ ವಲಸಿಗರಿಂದ ಆಂತರಿಕ ಕಲಹಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಅಲ್ಲದೇ ವಲಸಿಗ ಅಫ್ಘಾನರು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ. ಈವರೆಗೂ ನಡೆದ ಸುಮಾರು ನಡೆದ 24 ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 14 ಅಫ್ಘಾನಿಸ್ತಾನ ಪ್ರಜೆಗಳ ಕೈವಾಡವಿದೆ ಎಂದು ಪಾಕ್ ಹೇಳಿದೆ.
ಇತ್ತೀಚೆಗೆ ನಡೆಸಲಾದ ಬಾಂಬ್ ದಾಳಿಯಲ್ಲಿ ಪಾಕ್‍ನ 57 ಜನರು ಸಾವಿಗೀಡಾಗಿದ್ದರು. ಇದಾದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪಾಕ್ ಸಭೆಯನ್ನು ನಡೆಸಿತ್ತು. ಈ ವೇಳೆ ಸೇನಾ ಅಧಿಕಾರಿಗಳು ಬಾಂಬ್ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳಲ್ಲಿ ಒಬ್ಬ ಅಫ್ಘಾನ್ ಪ್ರಜೆ ಎಂದು ವಾದಿಸಿದ್ದರು. ಅಷ್ಟೇ ಅಲ್ಲದೇ ಭಾರತದ ಗುಪ್ತಚರ ಸಂಸ್ಥೆಯೂ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿತ್ತು. ಇದರೊಂದಿಗೆ ಅಫ್ಘಾನ್ ನೆಲವನ್ನು ಉಗ್ರರ ತರಬೇತಿಗೆ ಬಳಸಲಾಗುತ್ತಿದೆ ಎಂದು ಪಾಕ್ ಹೇಳಿಕೊಂಡಿದೆ.
ಇದಾದ ಬಳಿಕ ತಾಲಿಬಾನ್ (Taliban) ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಗಡಿ ಸಮಸ್ಯೆಯೂ ಮತ್ತೆ ಮರುಜೀವ ಪಡೆದು, ಉಭಯ ದೇಶಗಳ ವ್ಯಾಪಾರ ವ್ಯವಹಾರ ಸಂಬಂಧ ಸ್ಥಗಿತಗೊಂಡಿದೆ.
ಅಫ್ಘಾನ್ ನಿರಾಶ್ರಿತರ ಮೇಲೆ ಕ್ರಮ
ಪಾಕ್‍ನ ಪೊಲೀಸ್ ಅಧಿಕಾರಿಗಳು ವಿವಿಧ ಅಫ್ಘಾನ್ ನಿರಾಶ್ರಿತರ ಶಿಬಿರಗಳು ಮತ್ತು ಅಫ್ಘಾನ್ ಪ್ರಜೆಗಳು ವಾಸಿಸುವ ಪ್ರದೇಶಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸಲು ಯಾವುದೇ ಕಾನೂನು ದಾಖಲೆಗಳಿಲ್ಲದ ನೂರಾರು ಕುಟುಂಬಗಳನ್ನು ವಶಕ್ಕೆ ಪಡೆದಿದ್ದಾರೆ. ಇಸ್ಲಾಮಾಬಾದ್ ಮತ್ತು ಇತರ ಪ್ರಮುಖ ನಗರಗಳಲ್ಲಿ ತಾತ್ಕಾಲಿಕ ಅಫ್ಘಾನ್ ನಿರಾಶ್ರಿತರ ಶಿಬಿರಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಅಫ್ಘಾನ್ ನಿರಾಶ್ರಿತರು ವಾಪಸ್ ಆಗದೇ ಬೇರೆ ದಾರಿ ಇಲ್ಲದಂತಾಗಿದೆ.
ಇಲ್ಲಿಯ ವರೆಗೂ ಕನಿಷ್ಠ 1,000 ಜನರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ದಾಖಲೆ ಹೊಂದಿರದ ಸುಮಾರು 503 ಅಫ್ಘಾನ್ ನಿರಾಶ್ರಿತರನ್ನು ಜೈಲಿಗೆ ಕಳುಹಿಸಲಾಗಿದೆ. ಅಧಿಕಾರಿಗಳಿಗೆ ದಾಖಲೆ ತೋರಿಸಲು ವಿಫಲರಾದವರ ಡಿಎನ್‍ಎ ಪರೀಕ್ಷಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೇ ಸೇನೆಯನ್ನು ಬಳಸಿಕೊಂಡು ದೇಶದಿಂದ ಹೊರಗೆ ಕಳಿಸುವ ಯೋಜನೆಯನ್ನು ಪಾಕ್ ಹಾಕಿಕೊಂಡಿದೆ. ಆದರೆ ಪಾಕ್ ಈ ಕ್ರಮಕ್ಕೆ ತಾಲಿಬಾನ್ ಅಸಮಾಧಾನ ವ್ಯಕ್ತಪಡಿಸಿದೆ.
ತಾಲಿಬಾನ್ ಪ್ರತಿಕ್ರಿಯೆ ಏನು?
ಪಾಕ್ ಈಗ ಅಕ್ರಮವಾಗಿ ವಾಸವಾಗಿರುವ ಅಫ್ಘಾನ್ ವಲಸಿಗರನ್ನು (Afghan Immigrants) ಬಲವಂತವಾಗಿ ಹೊರಹಾಕುವ ಪ್ರಯತ್ನಕ್ಕೆ ತಾಲಿಬಾನ್ ಸರ್ಕಾರ ಇದು ಸರಿಯಾದ ಕ್ರಮವಲ್ಲ ಎಂದು ಪ್ರತಿಕ್ರಿಯಿಸಿದೆ. ನಿರಾಶ್ರಿತರ ಬಗ್ಗೆ ಪಾಕಿಸ್ತಾನದ ವರ್ತನೆ ಒಪ್ಪುವಂತಹದ್ದಲ್ಲ ಎಂದು ತಿರುಗೇಟು ನೀಡಿದೆ. ಅಲ್ಲದೇ ಅವರಾಗಿಯೇ ದೇಶ ತೊರೆಯುವ ತನಕ ಪಾಕ್ ಯಾವುದೇ ಕ್ರಮಕೈಗೊಳ್ಳದೇ ಸಂಯಮದಿಂದ ಇರಬೇಕು ಎಂದು ಸೂಚಿಸಿದೆ.
Web Stories