LatestMain PostNational

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಶ್ರೀನಗರ: ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಹೊಡೆದುರುಳಿಸಿದ ಘಟನೆ ನಡೆದಿದೆ.

ಪಾಕಿಸ್ತಾನದ ಡೋನ್ ಗಡಿ ದಾಟಿ ಭಾರತದ ಕಡೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್‍ಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲಿ ಹರಿಯ ಚಾಕ್ ಪ್ರದೇಶದ ಗಡಿಯಿಂದ ಡ್ರೋನ್‍ನ ಚಲನೆಯನ್ನು ಗಮನಿಸಿದ ಗಡಿ ಭದ್ರತಾ ಪಡೆ ಶೋಧ ಕಾರ್ಯವನ್ನು ಕೈಗೊಂಡು, ಡ್ರೋನ್‍ಗೆ ಗುಂಡು ಹೊಡೆದು ಕೆಳಗೆ ಬಿಳಿಸಿದೆ.

ನೆಲಕ್ಕೆ ಬಿದ್ದ ಡ್ರೋನ್‍ಗೆ ಪೇಲೋಡ್ ಅನ್ನು ಜೋಡಿಸಲಾಗಿದೆ ಮತ್ತು ಅದನ್ನು ಬಾಂಬ್ ನಿಷ್ಕ್ರಿಯ ದಳವು ಪರೀಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯನಿರತ ಯೋಧ ಹುತಾತ್ಮ- ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಗಡಿಯಾಚೆಯಿಂದ ಆಗಾಗ ಈ ರೀತಿ ಡ್ರೋನ್ ಚಟುವಟಿಕೆ ಆಗಿತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲು ತಂಡವನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

Leave a Reply

Your email address will not be published.

Back to top button