ಬೀಫ್‌ ನೀಡಲ್ಲ ಅಂದ BCCI; ಚಿಕನ್‌, ಮಟನ್‌, ಫಿಶ್‌ ಔತಣಕ್ಕೆ ಪಾಕ್‌ ಆಟಗಾರರು ಫಿದಾ

Public TV
3 Min Read
Babar

ಹೈದರಾಬಾದ್: ಇದೇ ಅಕ್ಟೋಬರ್ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್ (ICC WorldCup) ಟೂರ್ನಿಯನ್ನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ನಲ್ಲಿ (Hyderabad) ವಾಸ್ತವ್ಯ ಹೂಡಿದೆ. ಪಾಕಿಸ್ತಾನ ತಂಡದ ಆಟಗಾರರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದ್ದು, ಇದೀಗ ಅದ್ಧೂರಿ ಔತಣವನ್ನೂ ನೀಡಲಾಗಿದೆ. ಈ ಕುರಿತ ವೀಡಿಯೋ ತುಣುಕನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ತನ್ನ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದೆ.

ನ್ಯೂಜಿಲೆಂಡ್‌ ವಿರುದ್ಧ ಮೊದಲ ಅಭ್ಯಾಸ ಪಂದ್ಯದ ಬಳಿಕ ಪಾಕಿಸ್ತಾನ ತಂಡ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ (Hotel) ವಾಸ್ತವ್ಯ ಹೂಡಿದ್ದು, ವಿವಿಧ ಮಾಂಸಾಹಾರ (Nonveg) ಖಾದ್ಯಗಳ ಔತಣ ನೀಡಲಾಗಿದೆ. ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam), ಮೊಹಮ್ಮದ್‌ ರಿಜ್ವಾನ್‌, ಶಾಹೀನ್‌ ಶಾ ಅಫ್ರಿದಿ ಮೊದಲಾದವರು ಈ ಖುಷಿಯನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲೇ ಪಾಕ್‌ಗೆ ಸೋಲಿನ ರುಚಿ – ಕಿವೀಸ್‌ಗೆ 5 ವಿಕೆಟ್‌ಗಳ ಜಯ

ಪಾಕಿಸ್ತಾನದಲ್ಲಿ ನಮ್ಮ ಅಭಿಮಾನಿಗಳು ನಮ್ಮನ್ನು ಹೇಗೆ ಪ್ರೀತಿಸುತ್ತಾರೋ ಹಾಗೆಯೇ ಭಾರತೀಯ ಪ್ರೇಕ್ಷಕರೂ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ಮೊಹಮ್ಮದ್‌ ರಿಜ್ವಾನ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

Dinner

ಏನೆಲ್ಲಾ ಸ್ಪೆಷಲ್‌ ಫುಡ್‌ ಇದೆ ಗೊತ್ತಾ?
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೇರಿ ಪಾಲ್ಗೊಳ್ಳುವ ಕ್ರಿಕೆಟ್‌ ತಂಡಗಳಿಗೆ ಗೋಮಾಂಸ (ಬೀಫ್‌) ನಿಷೇಧಿಸಲಾಗಿದೆ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ದೈನಂದಿನ ಪ್ರೋಟೀನ್‌ಯುಕ್ತ ಆಹಾರವಾಗಿ ಚಿಕನ್‌, ಮಟನ್‌ ಹಾಗೂ ಫಿಶ್‌ ಮಾಂಸಾಹಾರ ಖಾದ್ಯಗಳನ್ನು ನೀಡಲಾಗುತ್ತಿದೆ. ಡಯಟ್ ಚಾರ್ಟ್‌ನಲ್ಲಿ ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ನೀಡಲಾಗುತ್ತಿದೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ ಅಲ್ಲ, ವಿಶ್ವ ಟೆರರ್‌ ಕಪ್‌ ಮಾಡ್ತೀವಿ – ಖಲಿಸ್ತಾನ್‌ ಉಗ್ರನಿಂದ ಬೆದರಿಕೆ

ಬಿರಿಯಾನಿಯಂತಹ ಆಹಾರ ಪದಾರ್ಥಗಳನ್ನ ತಯಾರಿಸಲು ಸ್ಟೀಮ್ಡ್ ಬಾಸುಮತಿ ರೈಸ್ ಅನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಬೊಲೊಗ್ನೀಸ್ ಸಾಸ್‌ನಲ್ಲಿರುವ ಸ್ಪಾಗೆಟ್ಟಿ, ಶೇನ್ ವಾರ್ನ್ ಚಿಕನ್ ಹಾಗೂ ವೆಜ್ ಪಲಾವ್ ಎಲ್ಲದಕ್ಕಿಂತ ಮುಖ್ಯವಾಗಿ ಹೈದರಾಬಾದ್ ಬಿರಿಯಾನಿ ಕಡ್ಡಾಯವಾಗಿದೆ. ಒಟ್ಟಿನಲ್ಲಿ ಭಾರತದಲ್ಲಿ ನೀಡುತ್ತಿರುವ ಆತಿಥ್ಯಕ್ಕೆ ಪಾಕ್‌ ಆಟಗಾರರು ಫಿದಾ ಆಗಿದ್ದಾರೆ. ಇದನ್ನೂ ಓದಿ: Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

ನ್ಯೂಜಿಲೆಂಡ್‌ ವಿರುದ್ಧ ಶುಕ್ರವಾರ ಪಾಕಿಸ್ತಾನ ಅಭ್ಯಾಸ ಪಂದ್ಯದಲ್ಲಿ ಉತ್ತಮ ರನ್‌ ಕಲೆಹಾಕಿದರೂ ಸೋಲನ್ನು ಅನುಭವಿಸಿತು. ಈ ಪಂದ್ಯದ ಕುರಿತು ಮಾತನಾಡಿರುವ ಮೊಹಮ್ಮದ್‌ ರಿಜ್ವಾನ್‌, ಅಭ್ಯಾಸ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದೆ. ಏಕದಿನ ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡುತ್ತೇನೆ. ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಟ್‌ ಬೀಸುತ್ತೇನೆ ಎಂದು ತಿಳಿಸಿದ್ದಾರೆ.

ಮೊದಲ ಅಭ್ಯಾಸ ಪಂದ್ಯದ ಬಳಿಕ ಹೈದರಾಬಾದ್‌ ಪಿಚ್‌ ಬಗ್ಗೆ ಅರಿತಿರುವ ಪಾಕ್‌ ತಂಡ ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಭ್ಯಾಸ ಪಂದ್ಯವನ್ನಾಡಲಿದೆ. ಆ ನಂತರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.

ಅಕ್ಟೋಬರ್ 14 ರಂದು ಹೈವೋಲ್ಟೇಜ್ ಕದನ: ಅ.5ರಿಂದ ನ.19ರ ವರೆಗೆ ಭಾರತದ ವಿವಿಧ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕ್ ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ಅ ಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

Web Stories

Share This Article