ಭಾರತದ ಯುವತಿಯನ್ನ ಮದ್ವೆಯಾದ ಪಾಕ್ ಕ್ರಿಕೆಟಿಗ

Public TV
1 Min Read
Hassan ali

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಹಸನ್ ಅಲಿ ಭಾರತ ಮೂಲದ ಶಮಿಯಾ ಆರ್ಜೂ ಅವರನ್ನು ಮದುವೆ ಆಗಿದ್ದಾರೆ. ದುಬೈನ ಅಟ್ಲಾಂಟಿಸ್ ಪಾಮ್ ಜಮೈರಾ ಪಾರ್ಕ್ ಹೋಟೆಲ್‍ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.

ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ತರಬೇತಿ ಹಿನ್ನೆಲೆಯಲ್ಲಿ ಗೈರಾಗಿದ್ದರು. ಹಸನ್ ಅಲಿ ಕುಟುಂಬಸ್ಥರು ಆಯೋಜಿಸುವ ವಲೀಮಾ (ಆರತಕ್ಷತೆ)ದಲ್ಲಿ ಪಾಕ್ ಕ್ರಿಕೆಟ್ ತಂಡ ಭಾಗಿಯಾಗಲಿದೆ ಎಂದು ವರದಿಯಾಗಿದೆ.

ಶಮಿಯಾ ಆರ್ಜೂ ಹರ್ಯಾಣದ ನೂಹ ಜಿಲ್ಲೆಯವರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಸದ್ಯ ಇಬ್ಬರ ಮದುವೆ ಫೋಟೋಗಳು ಪಾಕಿಸ್ತಾನ ಮತ್ತು ಭಾರತದಲ್ಲಿ ಮಿಂಚಿನಂತೆ ಹರಿದಾಡುತ್ತಿವೆ. ಶಾಮಿಯಾ ಅರ್ಜೂ ದುಬೈನ ಖಾಸಗಿ ವಿಮಾನ ಸಂಸ್ಥೆಯಲ್ಲಿ ಪೈಲಟ್ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಯಾಣ ಮೂಲದವರಾದರೂ ಶಾಮಿಯಾ ಇಂಗ್ಲೆಂಡ್‍ನಲ್ಲಿ ಶಿಕ್ಷಣ ಪಡೆದಿದ್ದು, ಆ ಬಳಿಕ ಪೋಷಕರೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಅವರ ಕುಟುಂಬಸ್ಥರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ದುಬೈನಲ್ಲಿಯೇ ಗೆಳತಿಯ ಮೂಲಕ ಶಾಮಿಯಾ ಹಸನ್‍ರನ್ನ ಮೊದಲು ಭೇಟಿ ಮಾಡಿದ್ದರು ಎಂದು ಮಾಧ್ಯಮ ವರದಿ ಮಾಡಿದೆ. ಹಸನ್ ಪಾಕ್ ಪರ 9 ಟೆಸ್ಟ್, 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2017ರ ಚಾಂಪಿಯನ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೊಯೆಬ್ ಮಲಿಕ್ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು 2010 ರಲ್ಲಿ ವಿವಾಹವಾಗಿದ್ದರು.

https://www.instagram.com/p/B1YaX17ndJx/

Share This Article
Leave a Comment

Leave a Reply

Your email address will not be published. Required fields are marked *