– ಕ್ರೀಡಾಂಗಣ ನವೀಕರಣಕ್ಕೆ 17 ಶತಕೋಟಿ ಖರ್ಚು
ಇಸ್ಲಾಮಾಬಾದ್: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಕ್ಯಾತೆ ತೆಗೆದಿದೆ. ಇದು ಪಾಕಿಸ್ತಾನದ ಗೌರವ, ಪ್ರತಿಷ್ಠೆ. ಬಿಸಿಸಿಐ ಷರತ್ತಿನಂತೆ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಸೋಮವಾರ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಉತ್ಸುಕವಾಗಿಲ್ಲ. ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ
ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ ಐಸಿಸಿಗೆ ವೇಳಾಪಟ್ಟಿಯನ್ನು ಕಳಿಸಿದ್ದೇವೆ. ಮುಲ್ತಾನ್, ರಾವಲ್ಪಿಂಡಿ ಹಾಗೂ ಲಾಹೋರ್ ಕ್ರೀಡಾಂಗಣಗಳು ಟ್ರೋಫಿ ಆತಿಥ್ಯ ವಹಿಸುತ್ತಿವೆ. ಭಾರತದ ಎಲ್ಲ ಪಂದ್ಯಗಳೂ ಲಾಹೋರ್ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಶೀಘ್ರದಲ್ಲೇ ಐಸಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ಹಾಗಾಗಿ ಪಾಕ್ ತನ್ನ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 46 ಬೌಂಡರಿ, 12 ಸಿಕ್ಸರ್ – ಒಂದೇ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್ ಚಚ್ಚಿ ಹೊಸ ದಾಖಲೆ ಸೃಷ್ಟಿ!
ಬಿಸಿಸಿಐ ಷರತ್ತು ಏನು?
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ. ಇದನ್ನೂ ಓದಿ: Champions Trophy | ಪಾಕ್ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ
ಐಸಿಸಿ ಮುಂದಿರುವ ಆಯ್ಕೆಗಳೇನು?
ಆಯ್ಕೆ – 1
ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
ಆಯ್ಕೆ – 2
ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್ ತಂಡ ದೂರ ಉಳಿಯಲಿದೆ.
ಆಯ್ಕೆ – 3
ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.