ನಾಲ್ಕೇ ತಿಂಗಳಿಗೆ ಪಾಕ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಗ್ಯಾರಿ ಗುಡ್‌ಬೈ

Public TV
3 Min Read
Gary Kirsten

– 2011ರ ವಿಶ್ವಕಪ್‌ ವೇಳೆ ಟೀಂ ಇಂಡಿಯಾ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ನಲ್ಲಿ (Pakistan, Cricket) ಯಾರು ಯಾವ ಹುದ್ದೆಯಲ್ಲಿದ್ದಾರೆಂದು ಹೇಳುವುದೇ ಕಷ್ಟವಾಗುತ್ತಿದೆ. ಏಕೆಂದರೆ ಕ್ರಿಕೆಟ್‌ ತಂಡದಲ್ಲಿ ತತಕ್ಷಣದ ಬದಲಾವಣೆಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೆ ನಾಯಕನ ಬದಲಾವಣೆಯೂ ಮಾಡಿರುವ ಪಾಕ್‌ ತಂಡ ಇದೀಗ ಮುಖ್ಯಕೋಚ್‌ ಬದಲಾವಣೆಗೂ ಮುಂದಾಗಿದೆ. 4 ತಿಂಗಳ ಹಿಂದೆಯಷ್ಟೇ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ವೈಟ್‌ಬಾಲ್‌ ಕ್ರಿಕೆಟ್‌ನ ಮುಖ್ಯಕೋಚ್‌ ಆಗಿ ನೇಮಕವಾಗಿದ್ದ ಗ್ಯಾರಿ ಕರ್ಸ್ಟನ್ (Gary Kirsten) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್‌ ಅವರು ಕೋಚಿಂಗ್‌ನಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಕ್ರಿಸ್ಟನ್‌ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಮೆಂಟರ್‌ ಆಗಿದ್ದರು. 2011ರಲ್ಲಿ ವಿಶ್ವಕಪ್‌ ಗೆದ್ದ ವೇಳೆ ಅವರು ಭಾರತ ತಂಡದ ಕೋಚ್‌ ಆಗಿದ್ದವರು. ಕಳೆದ ನಾಲ್ಕು ತಿಂಗಳ ಹಿಂದೆ ಅವರು ಪಾಕಿಸ್ತಾನದ ಏಕದಿನ ಮತ್ತು ಟಿ20 ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕವಾಗಿದ್ದರು. ಇದನ್ನೂ ಓದಿ: ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

Gary Kirsten

ಗ್ಯಾರಿ ಕರ್ಸ್ಟನ್ ವೈಟ್‌ಬಾಲ್‌ ಕ್ರಿಕೆಟ್‌ನ ಮುಖ್ಯಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂಬರುವ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಟೆಸ್ಟ್ ತಂಡದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ವೈಟ್ ಬಾಲ್ ಕೋಚ್‌ ಆಗಿ ನೇಮಕ ಮಾಡಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಿಳಿಸಿದೆ. ಈ ಸಂದೇಶವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ವೈಟ್‌ಬಾಲ್‌ ಕ್ರಿಕೆಟ್‌ಗೆ ನೂತನ ಕೋಚ್‌ ಅನ್ನು ಸೂಕ್ತ ಸಮಯದಲ್ಲಿ ನೇಮಿಸಲಾಗುವುದು. ಅಲ್ಲಿಯವರೆಗೆ ಗಿಲ್ಲೆಸ್ಪಿಯವರ ತಾತ್ಕಾಲಿಕ ಕೋಚ್‌ ಆಗಿ ಮುಂದುವರಿಯುವುದಾಗಿ ತಿಳಿಸಿದೆ.

gary kirsten 2

ಕರ್ಸ್ಟನ್‌ ಅವರು ಮುಂಬರುವ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳಿಗೆ ತಂಡದ ಆಯ್ಕೆ ಬಗ್ಗೆ ಪಿಸಿಬಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಕೊನೆಗೆ ಪಿಸಿಬಿ ಕಸ್ಟರ್ನ್‌ ಅವರ ಸಲಹೆಗಳನ್ನೇ ಪರಿಗಣನೆಗೆ ತೆಗೆದುಕೊಳ್ಳದೇ ತಂಡವನ್ನು ಪ್ರಕಟಿಸಿದೆ. ಇದರಿಂದ ಬೇಸರಗೊಂಡ ಕರ್ಸ್ಟನ್‌ ತಮ್ಮ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

2024ರ ಐಪಿಎಲ್‌ ಟೂರ್ನಿ ಬಳಿಕ ಪಾಕ್‌ ತಂಡದ ವೈಟ್‌ಬಾಲ್‌ ಕ್ರಿಕೆಟ್‌ ಮುಖ್ಯಕೋಚ್‌ ಆಗಿ ನೇಮಕಗೊಂಡು, 2024ರ ಟಿ20 ವಿಶ್ವಕಪ್‌ ಟೂರ್ನಿಯಿಂದ ತಮ್ಮ ವೃತ್ತಿ ಆರಂಭಿಸಿದ್ದರು. ಅಲ್ಲದೇ 2025ಕ್ಕೆ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ, 2025ರ ಐಸಿಸಿ ಟಿ20 ಏಷ್ಯಾಕಪ್‌, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗಳಿಗೆ ಪಾಕ್‌ ತಂಡದ ಮುಖ್ಯಕೋಚ್‌ ಆಗಿ ಗ್ಯಾರಿ ಕೆಲಸ ಮಾಡಲಿದ್ದಾರೆ ಎಂದು ಪಿಸಿಬಿ ಹೇಳಿತ್ತು. ಆದ್ರೆ ಕೋಚ್‌ ಆಗಿ ನೇಮಕಗೊಂಡ ನಾಲ್ಕೇ ತಿಂಗಳಿಗೆ ಕೋಚ್‌ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.

ಗ್ಯಾರಿ ಕೋಚ್‌ ಆಗಿ ನಿರ್ವಹಿಸಿದ ಮೊದಲ ಟಿ20 ವಿಶ್ವಕಪ್‌ ಆವೃತ್ತಿಯಲ್ಲೇ ಪಾಕ್‌ ಹೀನಾಯ ಸೋಲಿಗೆ ತುತ್ತಾಯಿತು. ಆ ಆವೃತ್ತಿಯಲ್ಲಿ ಪಾಕ್‌ ಲೀಗ್‌ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

Share This Article