ಇಸ್ಲಾಮಾಬಾದ್: ಪೊಲೀಸ್ ಒಬ್ಬರು ತನ್ನ ಸ್ವಂತ ಮಕ್ಕಳನ್ನು 50,000 ರೂ. ಗೆ ಮಾರಾಟ ಮಾಡಿದ ಕರುಳು ಹಿಂಡುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ನಡೆದಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ತಂದೆಯೊಬ್ಬರು ತಮ್ಮ ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕರುಳು ಹಿಂಡುವ ವೀಡಿಯೋ ನೋಡಿ ಜನರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ, ಕಾರಾಗೃಹ ಇಲಾಖೆಯ ಪೊಲೀಸ್ ನಿಸಾರ್ ಲಶಾರಿ ಅವರು ರಸ್ತೆಯ ಮಧ್ಯದಲ್ಲಿ ತನ್ನ ಇಬ್ಬರು ಮಕ್ಕಳನ್ನು ನಿಲ್ಲಿಸಿಕೊಂಡು ಕೂಗುತ್ತಿರುತ್ತಾರೆ. ನಂತರ ಕಿರಿಯ ಮಗನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ತನ್ನ ಮಕ್ಕಳನ್ನು 50,000 ರೂ.ಗೆ ಮಾರುತ್ತಿರುವುದಾಗಿ ಕೂಗಿ ಜನರನ್ನು ಕರೆದಿದ್ದಾರೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ
Advertisement
گھوٹکی کے پولیس اہلکار کو بچے کے علاج کے لیے چھٹی نہ ملی اور لاڑکانہ تبادلہ کردیا گیا، چھٹی لینے اور تبادلہ رکوانے کے لیے افسران کو پچاس ھزار روپے رشوت دینی پڑے گی، اہلکار پچاس ھزار میں ایک بیٹا بیچنے کی آوازیں لگاتا رہا۔
ہائے انسانیت کہاں ہے ???????? pic.twitter.com/i9hRF7IsNQ
— Sheikh Sarmad (@ShSarmad71) November 13, 2021
Advertisement
ಈ ನಿರ್ಧಾರಕ್ಕೆ ಕಾರಣವೇನು?
ಲಶಾರಿಗೆ ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ರಜೆಯ ಅಗತ್ಯವಿತ್ತು. ಅವರ ಬಾಸ್ ಬಳಿ ರಜೆ ಕೇಳಿದರೆ, ಅವರು ಬದಲಾಗಿ ಲಂಚವನ್ನು ಕೇಳಿದರು. ಮೇಲಧಿಕಾರಿಗೆ ಲಂಚ ಕೊಡಲು ಸಾಧ್ಯವಾಗದಿದ್ದಾಗ ಅವರ ರಜೆಯನ್ನು ರದ್ದುಪಡಿಸಿ ನಗರದಿಂದ 120 ಕಿ.ಮೀ ದೂರದಲ್ಲಿರುವ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತು.
Advertisement
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಲಂಚ ಕೊಡದಿದ್ದಕ್ಕೆ ಅವರು ನನಗೆ ಈ ಶಿಕ್ಷೆಯನ್ನು ಏಕೆ ನೀಡಿದರು? ನಾನು ತುಂಬಾ ಬಡವನಾಗಿದ್ದು, ಕಾರಾಗೃಹಗಳ ಇನ್ಸ್‍ಪೆಕ್ಟರ್ ಜನರಲ್‍ಗೆ ದೂರು ನೀಡಲು ಕರಾಚಿಗೆ ಹೋಗಲೂ ಸಾಧ್ಯವಾಗಲಿಲ್ಲ. ಇಲ್ಲಿನ ಜನರು ತುಂಬಾ ಶಕ್ತಿಶಾಲಿಗಳು ಮತ್ತು ಸಾಮಾನ್ಯವಾಗಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.
ನಾನು ಲಂಚವನ್ನು ಪಾವತಿಸಬೇಕೇ ಅಥವಾ ನನ್ನ ಮಗುವಿನ ಆರೋಗ್ಯಕ್ಕೆ ಹಣ ಪಾವತಿಸಬೇಕೇ? ನಾನು ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಿತ್ತೇ? ಎಂದು ಪ್ರಶ್ನಿಸಿದರು.
ವೀಡಿಯೋ ವೈರಲ್ ಆಗಿದ್ದು, ತಂದೆಯ ಅಸಹಾಯಕತೆಯನ್ನು ಕಂಡು ನೆಟ್ಟಿಗರು ಎದೆಗುಂದಿದ್ದಾರೆ. ಒಬ್ಬ ವೀಕ್ಷಕರು, ಈ ವೀಡಿಯೋ ನೋಡಿ ತುಂಬಾ ದುಃಖವಾಗಿದೆ. ಅವರು ಅಸಹಾಯಕತೆಯಲ್ಲಿ ಏನು ಮಾಡುತ್ತಿದ್ದಾರೆ? ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು – ಈ ವೀಡಿಯೋ ನೋಡಿ!
This is happening with forces. Imagine what can happen with ordinary people. Hope sense will prevail and we dont become like Afghanistan and syria where there is no system
— Waleed Talpur (@talpur_waleed) November 14, 2021
ವೀಡಿಯೋ ವೈರಲ್ ಆಗುತ್ತಿದ್ದಂತೆ, ಲಶಾರಿಯ ಸ್ಥಿತಿ ಬಗ್ಗೆ ಸಿಂಧ್‍ನ ಸಿಎಂ ಮುರಾದ್ ಅಲಿ ಶಾ ಅವರ ಗಮನಕ್ಕೆ ಬಂದಿದೆ. ನಂತರ ಅವರು ಈ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸಿ, ಲಶಾರಿಗೆ ಘೋಟ್ಕಿಯ ಜೈಲಿನಲ್ಲಿ ತನ್ನ ಕೆಲಸದಲ್ಲಿ ಉಳಿಯುವಂತೆ ಮಾಡಿದರು. ಅದು ಅಲ್ಲದೇ ಅವರಿಗೆ 14 ದಿನಗಳ ರಜೆಯನ್ನು ನೀಡುವಂತೆ ಮಾಡಿದರು. ಆದ್ದರಿಂದ ಅವರು ತಮ್ಮ ಮಗುವಿನೊಂದಿಗೆ ಚಿಕಿತ್ಸೆಗಾಗಿ ಇರಲು ಸಾಧ್ಯವಾಗಿದೆ. ಇದರಿಂದ ಖುಷಿಗೊಂಡ ಲಶಾರಿ ಅವರು ಅಲಿ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.