ಇಸ್ಲಾಮಾಬಾದ್: ಭಾರತದ ರಫೇಲ್ ಜೆಟ್‌ಗಳಿಗೆ ಪೈಪೋಟಿ ನೀಡಲು ಪಾಕ್ ಸರ್ಕಾರ ಮುಂದಾಗಿದೆ. ಪಾಕಿಸ್ತಾನದ ವಾಯುಪಡೆಗೆ (ಪಿಎಎಫ್) ಚೀನಾದ ಜೆ-10ಸಿ ಫೈಟರ್ 25 ಜೆಟ್‌ಗಳನ್ನು ಖರೀದಿ ಮಾಡಲಾಗುವುದು ಎಂದು ಖಚಿತಪಡಿಸಿದೆ.
ಜೆ-10ಸಿ ಜೆಟ್, ಚೀನಾದ ವಾಯುಪಡೆಯ ಸಮರ್ಥ ವರ್ಕ್ಹಾರ್ಸ್ ಆಗಿದೆ. ಇದು ರಫೇಲ್‌ಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದರೂ, ರಫೇಲ್‌ನಂತೆ ಉನ್ನತ ಸಂವೇದಕಗಳು ಮತ್ತು ಯುದ್ಧ ಮಾಡುವ ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ
Advertisement
Advertisement
ಮುಂದಿನ ವರ್ಷದ ಮಾರ್ಚ್ 23 ರಂದು ಚೀನಾ ನಿರ್ಮಿತ 25 ಜೆಟ್‌ಗಳು ಸ್ಕ್ವಾಡ್ರನ್ ಫ್ಲೈ-ಪಾಸ್ಟ್ ನಲ್ಲಿ ಭಾಗವಹಿಸಲಿವೆ. ಈ ಜೆಟ್‌ಗಳು ಭಾರತದ ರಫೇಲ್ ಜೆಟ್‌ಗಳಿಗೆ ಪೈಪೋಟಿ ನೀಡುವಲ್ಲಿ ಸಮರ್ಥವಾಗಿವೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ.
Advertisement
Advertisement
ಚೀನಾದ ಜೆಟ್‌ಗಳನ್ನು ಖರೀದಿಸುವ ಬಗ್ಗೆ ಇಮ್ರಾನ್ ಖಾನ್ ಸರ್ಕಾರದ ಉದ್ದೇಶಗಳನ್ನು ಈಗಾಗಲೇ ಪ್ರತಿಪಕ್ಷಗಳು ಪ್ರಶ್ನಿಸಿವೆ. ಜೆ-10ಸಿ ರಫೇಲ್‌ನಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಡಾ. ಅಫ್ನಾನ್ ಉಲ್ಲಾ ಖಾನ್ ಈ ತಿಂಗಳ ಆರಂಭದಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ