ಇಸ್ಲಾಮಾಬಾದ್: ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್ ಅಜಮ್ (Babar Azam) ಸಹ ಆಟಗಾರನ ಗೆಳತಿಯೊಂದಿಗೆ ಚಾಟ್ ಮಾಡಿಕೊಂಡು, ಹನಿಟ್ರ್ಯಾಪ್‍ಗೆ (Honey Trap) ಸಿಲುಕಿರುವ ವೀಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಬಾಬರ್ ಅಜಮ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿಯ ಕೆಲವು ವೈಯಕ್ತಿಕ ವೀಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಆ ವ್ಯಕ್ತಿ ಹನಿ ಟ್ರ್ಯಾಪ್‍ನಲ್ಲಿ ಸಿಲುಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ವೀಡಿಯೋದಲ್ಲಿರುವ ಯುವತಿ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿ ಎಂದು ಹೇಳಲಾಗುತ್ತಿದೆ. ಆಕೆಯೊಂದಿಗೆ ಬಾಬರ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿ ಚಾಟ್ ಮಾಡುತ್ತಿರುವ ಮತ್ತು ವೀಡಿಯೋ ಕಾಲ್‌ನಲ್ಲಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪ್ರೇಕ್ಷಕರಿಲ್ಲದೇ ಖಾಲಿ ಹೊಡೆದ ಸ್ಟೇಡಿಯಂ – ಕೇರಳ ಕ್ರೀಡಾ ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ನಿಲ್ಲದ ಆಕ್ರೋಶ
The war against Babar Azam has started ????#BabarAzam???? #BabarAzam pic.twitter.com/JOSmHd9A32
— Muhammad Noman (@nomanedits) January 15, 2023
ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಸೋತ ಬಳಿಕ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಈ ನಡುವೆ ಈ ವೀಡಿಯೋ, ಫೋಟೋಗಳು ಹರಿದಾಡುತ್ತಿವೆ. ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೈಟ್‍ವಾಶ್ ಮುಖಭಂಗ ಅನುಭವಿಸಿತ್ತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2-1 ಅಂತರದಲ್ಲಿ ಏಕದಿನ ಸರಣಿ ಸೋತಿತ್ತು. ಆ ಬಳಿಕ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ನಡುವೆ ಇದೀಗ ವೈಯಕ್ತಿಕ ಫೋಟೋ, ವೀಡಿಯೋ ಲಿಕ್ ಆಗಿ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k