ಇಸ್ಲಾಮಾಬಾದ್: ಸಂಸತ್ ಚುನಾವಣೆಗೂ (Parliamentary Election) ಮುನ್ನಾ ದಿನವಾದ ಬುಧವಾರ ನೈಋತ್ಯ ಪಾಕಿಸ್ತಾನದ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯಲ್ಲಿ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ್ದು, ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲೂಚಿಸ್ತಾನ್ ಪ್ರಾಂತ್ಯದ ಪಿಶಿನ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಜನ್ ಅಚಕ್ಝೈ ಹೇಳಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಹೊಸ ಮಸೀದಿ – ಮೆಕ್ಕಾದಿಂದ ಬಂದಿದೆ ಪವಿತ್ರ ಇಟ್ಟಿಗೆ
Advertisement
Advertisement
ಪಿಶಿನ್ ಜಿಲ್ಲೆಯ (Pishin District) ಸ್ವತಂತ್ರ ಚುನಾವಣಾ ಅಭ್ಯರ್ಥಿಯ ಕಚೇರಿಯಲ್ಲಿ ನಡೆದ ಮೊದಲ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಇಂದು ಅಫ್ಘಾನ್ ಗಡಿಯ ಸಮೀಪದಲ್ಲಿರುವ ಕಿಲ್ಲಾ ಸೈಫುಲ್ಲಾ ಎಂಬ ಪಟ್ಟಣದಲ್ಲಿ ಎರಡನೇ ಸ್ಫೋಟವು ಜಮಿಯತ್ ಉಲೇಮಾ ಇಸ್ಲಾಂ (JUI) ನ ಕಚೇರಿಯ ಬಳಿ ಸ್ಫೋಟಗೊಂಡಿದೆ ಎಂದು ಪ್ರಾಂತ್ಯದ ಮಾಹಿತಿ ಸಚಿವರು ತಿಳಿಸಿದ್ದಾರೆ.
Advertisement
Advertisement
ಪಿಶಿನ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಜುಮ್ಮಾ ದಾದ್ ಖಾನ್ ಅವರು, ಸ್ಫೋಟದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸದರೂ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನದಲ್ಲಿ ಇತ್ತೀಚೆಗೆ ಉಗ್ರರ ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲೆಂದು ಪಾಕಿಸ್ತಾನದಾದ್ಯಂತ ಹತ್ತಾರು ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಿದ್ದರೂ ಸಹ ಬಾಂಬ್ ಸ್ಫೋಟ ಸಂಭವಿಸಿದೆ.