ಪೇಶಾವರ: ರಾಜಕೀಯ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟಗೊಂಡ (Bomb Blast) ಪರಿಣಾಮ ಕನಿಷ್ಠ 39 ಮಂದಿ ಸಾವನ್ನಪ್ಪಿ 200 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ (Pakistan-Afghanistan Border) ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಧಾರ್ಮಿಕವಾಗಿ ಹೆಚ್ಚು ಗುರುತಿಸಿಕೊಂಡಿದ್ದ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (Jamiat Ulema-e-Islam-F) ರಾಜಕೀಯ ಪಕ್ಷದ ಕಾರ್ಯಕ್ರಮ ನಡೆಯುತ್ತಿತ್ತು. ಟೆಂಟ್ ಒಳಗಡೆ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ದಾಳಿಯಲ್ಲಿ ಸ್ಥಳೀಯ ಜೆಯುಎಲ್-ಎಫ್ ನಾಯಕ ಮೃತಪಟ್ಟಿದ್ದಾರೆ.
Advertisement
Extremely graphic
Breaking ????????????????
Moment of explosion:
Bajaur Jamiat Ulema-e-Islam Workers Convention Blasts video released‼️ pic.twitter.com/bKeTSrrlvj
— Aqssss (@AqssssFajr) July 30, 2023
Advertisement
ಆಸ್ಪತ್ರೆಯಲ್ಲಿ 39 ಮೃತ ದೇಹಗಳಿವೆ. 123 ಮಂದಿ ಗಾಯಗೊಂಡಿದ್ದು ಈ ಪೈಕಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋ ಮೇಲೆ ಡ್ರೋನ್ ದಾಳಿ – ಇದು ಉಕ್ರೇನ್ ಕೃತ್ಯ ಎಂದ ರಷ್ಯಾ
Advertisement
ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪಾಕಿಸ್ತಾನದಲ್ಲಿರುವ ತೆಹ್ರಿಕ್ ಇ ತಾಲಿಬಾನ್ (Tehreek-e-Taliban) ಸಂಘಟನೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಲ್ಲಿನ ಸೈನಿಕರ ವಿರುದ್ಧ ಈ ಹಿಂದೆ ದಾಳಿ ನಡೆಸಿತ್ತು.
Advertisement
باجوڑ ؛
جمعیت علمائے اسلام کے ورکرز کنونشن میں دھماکہ۔۔۔ زخمیوں کی تعداد بہت زیادہ ہے، جانی نقصان کے شدید خطرات ہیں۔ پلیز سب جلدی جلدی ڈسٹرکٹ ہیڈکوارٹر ہسپتال خار، باجوڑ پہنچیں زخمیوں کو خون کی اشد ضرورت ہے #BajaurBlast pic.twitter.com/CST7kCiLcD
— Irza Khan (@irz__a) July 30, 2023
ಜನವರಿಯಲ್ಲಿ ಪಾಕಿಸ್ತಾನದ ತಾಲಿಬಾನ್‌ಗೆ ಸಂಬಂಧ ಹೊಂದಿರುವ ಆತ್ಮಹತ್ಯಾ ಬಾಂಬರ್ ವಾಯುವ್ಯ ನಗರದ ಪೇಶಾವರ್‌ನ ಪೊಲೀಸ್ ಆವರಣದೊಳಗಿನ ಮಸೀದಿಯೊಂದರಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರ ದಾಳಿ ನಡೆಯುತ್ತಿದೆ.
Web Stories