ಶ್ರೀನಗರ: 6 ಮಂದಿ ಕಾರ್ಮಿಕರು ಸೇರಿದಂತೆ ಓರ್ವ ವೈದ್ಯನ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿದೆ ಎಂದು ಸೇನಾ ಅಧಿಕೃತ ಮೂಲಗಳು ದೃಢಪಡಿಸಿವೆ.
ಟಿಆರ್‌ಎಫ್ ಮುಖ್ಯಸ್ಥ ಶೇಖ್ ಸಜ್ಜದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಗುಂಪಿನ ಸ್ಥಳೀಯ ಘಟಕವು ಆತನ ಆದೇಶದಂತೆ ಕಾಶ್ಮೀರಿಗಳು ಮತ್ತು ಕಾಶ್ಮೀರೇತರರನ್ನು ಗುರಿಯಾಗಿಸಿ ಮೊದಲ ಬಾರಿಗೆ ದಾಳಿ ನಡೆಸಿದೆ. ಟಿಆರ್‌ಎಫ್ ಕಾಶ್ಮೀರದಲ್ಲಿ ಸಕ್ರಿಯವಾಗಿದೆ ಮತ್ತು ಕಳೆದ ಒಂದೂವರೆ ವರ್ಷಗಳಲ್ಲಿ ಕಾಶ್ಮೀರಿ ಪಂಡಿತರು, ಸಿಖ್ಖರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ: ಸಿಪಿ ಯೋಗೇಶ್ವರ್
ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಭಯೋತ್ಪಾದನಾ ನಿಗ್ರಹ ಘಟಕದ ನಾಲ್ವರು ಸದಸ್ಯರ ತಂಡ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಮಧ್ಯಾಹ್ನ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ. ಭಾನುವಾರದ ದಾಳಿಯ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿಗಳಿಕೆ ಕೇಸ್ – ಲೋಕಾ ತನಿಖೆ ಪ್ರಶ್ನಿಸಿ ಸಿಬಿಐನಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆ
ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಆರು ಮಂದಿ ಕಾರ್ಮಿಕರನ್ನು ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ, ದಾಳಿಗೊಳಗಾದ ಕಾರ್ಮಿಕರು ಝಡ್ ಮೋರ್ಹ್ ಸುರಂಗದಲ್ಲಿ ಕೆಲಸ ಮಾಡುವ ತಂಡದ ಭಾಗವಾಗಿದ್ದರು. ಈ ಸುರಂಗ ಮಾರ್ಗವು ಗಗನೀರ್‌ನಿಂದ ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ಗೆ ಸಂಪರ್ಕಿಸುತ್ತದೆ. ಇದನ್ನೂ ಓದಿ: ದಾಂಪತ್ಯ ವಿರಸ- ಮೂವರು ಮಕ್ಕಳಿಗೆ ವಿಷ ಕುಡಿಸಿ, ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ದಾಳಿಯನ್ನು ಖಂಡಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವೈದ್ಯರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ಅನೇಕ ಜನರ ಹತ್ಯೆಯು ಅತ್ಯಂತ ಹೇಡಿತನ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಭಯೋತ್ಪಾದಕರ ಈ ದಿಟ್ಟತನವು ಜಮ್ಮು ಮತ್ತು ಕಾಶ್ಮೀರದ ಜನರ ನಂಬಿಕೆಯನ್ನು ಎಂದಿಗೂ ಮುರಿಯಲು ಸಾಧ್ಯವಿಲ್ಲ. ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ಇಡೀ ದೇಶವು ಒಗ್ಗೂಡಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಲಾರಿ-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು