– ಸರ್ಕಾರಿ ಅತಿಥಿ ಗೃಹವನ್ನೇ ಬಾಡಿಗೆ ಕೊಟ್ಟ ಇಮ್ರಾನ್ ಖಾನ್
– ಕತ್ತೆ ಆಯ್ತು ಈಗ ಬೀದಿನಾಯಿಗಳ ರಫ್ತಿಗೆ ಪಾಕ್ ನಿರ್ಧಾರ
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ತೀವ್ರ ಕುಸಿತಗೊಂಡಿರುವ ಕಾರಣಕ್ಕೆ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಅನಾವಶ್ಯಕವಾಗಿ ಮಾಡುವ ಖರ್ಚಿಗೆ ಬ್ರೇಕ್ ಹಾಕಲು ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಟೀ, ಕಾಫಿ, ತಿಂಡಿ, ಬಿಸ್ಕೆಟ್ ಬ್ಯಾನ್ ಮಾಡಿದ್ದೇವೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಆರ್ಥಿಕತೆ ಕುಸಿತ ಕಂಡ ಕಾರಣಕ್ಕೆ ಪಾಕಿಸ್ತಾನ ಬೀದಿಗೆ ಬಿದ್ದಿದೆ. ಪಾಕಿಸ್ತಾನದಲ್ಲಿ ಎಷ್ಟರ ಮಟ್ಟಿಗೆ ಹಣಹಾಸಿನ ಅಭಾವ ಬಂದಿದೆ ಎಂದರೆ, ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಿ ಅತಿಥಿ ಗೃಹವನ್ನೇ ಬಾಡಿಗೆ ಕೊಡುವಷ್ಟರ ಮಟ್ಟಿಗೆ ಆರ್ಥಿಕತೆ ಕುಸಿತಗೊಂಡಿದೆ.
Advertisement
ಪಾಕಿಸ್ತಾನ ಕಚೇರಿಗಳಲ್ಲಿ ಕಾಫಿ, ಟೀ, ಬಿಸ್ಕೆಟ್ ಗೂ ಗತಿ ಇಲ್ಲದಂತಾಗಿದೆ. ಪಾಕಿಸ್ತಾನ ಸರ್ಕಾರದ ಯಾವುದೇ ಅಧಿಕೃತ ಸಭೆಗಳಲ್ಲಿ ಕಾಫಿ-ತಿಂಡಿ, ಟೀ, ಬಿಸ್ಕೆಟ್ ಕೊಡದಂತೆ ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡಿದೆ. ಅಲ್ಲದೆ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಗೂ ಕಡಿವಾಣ ಹಾಕಿದೆ. ಜೊತೆಗೆ ಮೊಟರ್ ಬೈಕನ್ನು ಹೊರತುಪಡಿಸಿ ಇನ್ನಿತರ ವಾಹನಗಳ ಖರೀದಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ:ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್
Advertisement
Advertisement
ಪಾಕ್ ಅಕ್ಷರಶಃ ಬೀದಿಗೆ ಬಂದಿದೆ, ಈ ಹಿಂದೆ ಚೀನಾಗೆ ಕತ್ತೆ ರಫ್ತು ಮಾಡಿದ್ದ ಪಾಕ್ ಈಗ ಬೀದಿನಾಯಿಗಳನ್ನು ರಫ್ತು ಮಾಡಲು ನಿರ್ಧರಿಸಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಖರ್ಚು ಕಡಿಮೆ ಮಾಡಲು ಈ ರೀತಿ ಹೊಸ ನಿಯಮ ಜಾರಿಗೊಳಿಸಿದೆ.
Advertisement
ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ದಿನಪ್ರತಿಕೆ, ನಿಯತಕಾಲಿಕೆಗಳನ್ನು ತರಿಸಬೇಡಿ, ಕೇವಲ ಒಂದೇ ಪ್ರತಿಕೆ ಸಾಕು ಎಂದು ಸೂಚಿಸಿದೆ. ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ಜೆರಾಕ್ಸ್ ಅಥವಾ ಪ್ರಿಂಟ್ ತೆಗೆಯುವಾಗ ಕಾಗದದ ಎರಡು ಬದಿಯಲ್ಲೂ ಪ್ರಿಂಟ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ರೀತಿ ಹೀನಾಯ ಪರಿಸ್ಥಿತಿಯನ್ನು ಪಾಕ್ ಎದುರಿಸುತ್ತಿದೆ.
ಇಷ್ಟೆಲ್ಲಾ ಕಷ್ಟವಿದ್ದರು ಕೂಡ ಇಮ್ರಾನ್ ಖಾನ್‍ಗೆ ಬುದ್ಧಿ ಬಂದಿಲ್ಲ. ನಮ್ಮಲ್ಲೂ ನ್ಯೂಕ್ಲಿಯರ್ ಬಾಂಬ್ ಇದೆ ಎಂದು ಪಾಕಿಸ್ತಾನ ಮತ್ತೆ ಭಾರತಕ್ಕೆ ಬೆದರಿಕೆ ಹಾಕಿದೆ. ಕಾಶ್ಮೀರ ವಿಚಾರವನ್ನು ಬಗೆಹರಿಸಲು ಯಾವ ಮಟ್ಟಕ್ಕಾದರೂ ಇಳಿಯಲು ನಾವು ಸಿದ್ಧ ಎಂದು ಪಾಕ್ ಹೇಳಿದೆ.