ಇಸ್ಲಾಮಾಬಾದ್: ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶಿ ಸಂಚು ರೂಪಿಸಲಾಗಿದೆ ಎಂದು ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಪಾಕ್ ಸೇನೆ ತಳ್ಳಿಹಾಕಿದೆ.
ಇಮ್ರಾನ್ ಖಾನ್ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೂ ಮೊದಲು ತಮ್ಮ ಸರ್ಕಾರವನ್ನು ಉರುಳಿಸಲು ಅಮೆರಿಕ ಪಿತೂರಿ ನಡೆಸಿದೆ ಎಂದು ಆರೋಪ ಹೊರಿಸಿದ್ದರು. ಆದರೆ ಈ ಆರೋಪವನ್ನು ಸೇನೆ ತಿರಸ್ಕರಿಸಿದೆ. ಇದನ್ನೂ ಓದಿ: ಮಹಿಳಾ ರೋಗಿಗಳಿಗೆ ಕಿಸ್, ಹಗ್ ಮಾಡಿ ಲೈಂಗಿಕ ಅಪರಾಧ- ಭಾರತ ಮೂಲದ ವೃದ್ಧ ವೈದ್ಯನಿಗೆ ಶಿಕ್ಷೆ
Advertisement
Advertisement
ಕಳೆದ ತಿಂಗಳು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಬಳಿಕ ನೀಡಿದ ಹೇಳಿಕೆಯಲ್ಲಿ ಪಿತೂರಿ ಎಂಬ ಪದವನ್ನು ಬಳಸಲಾಗಿಲ್ಲ. ಪತ್ರದಲ್ಲೂ ಪಿತೂರಿಯಂತಹ ಯಾವುದೇ ಅಂಶಗಳಿಲ್ಲ ಎಂದು ಪಾಕಿಸ್ತಾನಿ ಮಾಧ್ಯಮ ವಿಭಾಗದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್‌ನ ಮಹಾನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಗುರುವಾರ ತಿಳಿಸಿದ್ದಾರೆ.
Advertisement
ಇಮ್ರಾನ್ ಖಾನ್ ಮಾರ್ಚ್ 27ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ತಮ್ಮ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ವಿರೋಧಿಸಿ ಮಾತನಾಡಿದ್ದರು. ತಾನು ರಷ್ಯಾಗೆ ಅಮೆರಿಕದ ಅನುಮತಿ ಇಲ್ಲದೇ ಭೇಟಿ ನೀಡಿದ್ದರಿಂದ, ತಮ್ಮನ್ನು ಪ್ರಧಾನಿ ಸ್ಥಾನದಿಂದ ತೆಗೆದು ಹಾಕಲು ಪಿತೂರಿ ನಡೆಸಲಾಗಿದೆ ಎಂದು ನೇರವಾಗಿ ಅಮೆರಿಕವನ್ನು ದೂಷಿಸಿದ್ದರು. ಆದರೆ ಈ ಆರೋಪವನ್ನು ಅಮೆರಿಕ ನಿರಾಕರಿಸಿತ್ತು. ಇದನ್ನೂ ಓದಿ: ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್
Advertisement
ಇದೀಗ ಇಮ್ರಾನ್ ಖಾನ್ ಅಮೆರಿಕದ ಮೇಲೆ ಹೊರಿಸಿದ್ದ ಆರೋಪವನ್ನು ಸೇನಾ ವಕ್ತಾರ ಜನರಲ್ ಬಾಬರ್ ಇಫ್ತಿಕರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇಮ್ರಾನ್ ಖಾನ್ ಆರೋಪದ ಬಳಿಕ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಕೂಡಾ ಅಮೆರಿಕದೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸುವ ಬಗ್ಗೆ ಮಾತನಾಡಿ ಸಮಸ್ಯೆಗಳನ್ನು ನಿಭಾಯಿಸಲು ಪ್ರಯತ್ನಿಸಿದ್ದರು.
2018ರಲ್ಲಿ ಇಮ್ರಾನ್ ಖಾನ್ ಪಾಕ್ ಪ್ರಧಾನಿಯಾಗುವಲ್ಲಿ ಸೇನೆ ಬಹು ದೊಡ್ಡ ಕೊಡುಗೆ ನೀಡಿತ್ತು. ಆದರೂ ಇದೀಗ ಇಬ್ಬರೂ ಪರಸ್ಪರ ವಿರೋಧಿಗಳಾಗಿದ್ದಾರೆ.