ಶ್ರೀನಗರ: ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಲು ನುಗ್ಗಿದ್ದ ಪಾಕಿಸ್ತಾನದ ವಿಮಾನವನ್ನು ಭಾರತ ಹೊಡೆದುರುಳಿಸಿದೆ.
ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಎಫ್ -16 ವಿಮಾನ ಭಾರತವನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಭಾರತದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಶ್ರೀನಗರ ಮತ್ತು ಅಮೃತಸರ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ವಿಮಾನಗಳ ಹಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾ, ಡೆಹ್ರಡೂನ್ನಲ್ಲಿ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ.
Advertisement
ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್, ಸಿಯಾಲ್ಕೋಟ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ.
Advertisement
Parachute seen as Pakistan Air Force's F-16 was going down, condition of the pilot is unknown https://t.co/yfcHxDjlXn
— ANI (@ANI) February 27, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv