ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ವಾಯುನೆಲೆಯ (Pakistan Mianwali Airbase) ಮೇಲೆ ಶನಿವಾರ (ನ.4) ಬಹು ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದಾರೆ.
ಹಲವು ಆತ್ಮಾಹುತಿ ಬಾಂಬ್ ದಾಳಿಕೋರರು ಶನಿವಾರ ಬೆಳಿಗ್ಗೆ ಮಿಯಾನ್‌ವಾಲಿ ತರಬೇತಿ ವಾಯುನೆಲೆಗೆ ನುಗ್ಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನ ವಾಯು ಪಡೆ (PAF) ತಿಳಿಸಿದೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ
Advertisement
Advertisement
ಭಾರೀ ಶಸ್ತ್ರಸಜ್ಜಿತರಾದ ಐದಾರು ಜನರ ಗುಂಪು ಶನಿವಾರ ಮುಂಜಾನೆ ತೀವ್ರ ಸ್ವರೂಪದ ದಾಳಿ ಆರಂಭಿಸಿತ್ತು. ಇದರಿಂದ ಎರಡೂ ಕಡೆಯಿಂದಲೂ ಗುಂಡಿನ ಚಕಮಕಿ ನಡೆಯಿತು. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಹತ್ಯೆಗೀಡಾಗಿದ್ದು, ದಾಳಿ ವಿಫಲಗೊಳಿಸಲಾಗಿದೆ ಎಂದು ಪಿಎಎಫ್ ತಿಳಿಸಿದೆ.
Advertisement
ಶನಿವಾರ ನಡೆದ ಉಗ್ರರ ದಾಳಿಯು ವಿಫಲವಾಗಿದೆ. ಇದಕ್ಕೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಿರುವ ಸೇನೆ, ಉಗ್ರರ ದಾಳಿಯನ್ನು ತಡೆದು ಆಸ್ತಿ ಮತ್ತು ಸೇನೆಯ ಸುರಕ್ಷತೆ ಬಗ್ಗೆ ಖಾತ್ರಿಪಡಿಸಿದೆ. ಪಾಕ್ ಸೇನೆಯು ಅಸಾಧಾರಣ ಪ್ರತಿಭೆ ಪ್ರದರ್ಶಿಸುವ ಮೂಲಕ ಮೂವರು ಉಗ್ರರನ್ನು ವಾಯುನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಹೊಡೆದುರುಳಿಸಲಾಗಿದೆ. ಉಳಿದ ಮೂವರು ಉಗ್ರರನ್ನು ಪ್ರತ್ಯೇಕಗೊಳಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್
Advertisement
ಆತ್ಮಹತ್ಯಾ ಬಾಂಬರ್‌ಗಳ ದಾಳಿಯಲ್ಲಿ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಮೂರು ಯುದ್ಧ ವಿಮಾನಗಳು ಹಾನಿಯಾಗಿವೆ. ಕೆಲ ಇಂಧನ ಟ್ಯಾಂಕರ್‌ಗಳು ಕೂಡ ಸುಟ್ಟು ಭಸ್ಮವಾಗಿವೆ ಎಂದು ಸೇನೆ ಹೇಳಿಕೊಂಡಿದೆ. ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ (ಟಿಜೆಪಿ) ಭಯೋತ್ಪಾದಕ ಸಂಘಟನೆಯು ಈ ದಾಳಿ ಹೊಣೆ ಹೊತ್ತುಕೊಂಡಿದೆ. ಸದ್ಯ ದಾಳಿ ಕುರಿತ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ
Web Stories