ನವದೆಹಲಿ: ಪುಣೆಯಲ್ಲಿ ನಡೆದ ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಸೋಲಿಸಲು ಬಾಂಗ್ಲಾ ಕ್ರಿಕೆಟಿಗರಿಗೆ ಪಾಕಿಸ್ತಾನದ (Pakistan) ನಟಿ ಸೆಹರ್ ಶಿನ್ವಾರಿ (Sehar Shinwari) ಬಿಗ್ ಆಫರ್ ಕೊಟ್ಟಿದ್ದಳು. ಇದೀಗ ಭಾರತ (Team India) ವಿರುದ್ಧ ಸೋಲಿನ ಬಳಿಕವೂ ನಟಿ ಪ್ರತಿಕ್ರಿಯಿಸಿದ್ದಾಳೆ.
Well played Bengali Tigers. At least you guys challanged Indian team on their home ground.????????
— Sehar Shinwari (@SeharShinwari) October 19, 2023
Advertisement
ಭಾರತ ವಿರುದ್ಧ ಬಾಂಗ್ಲಾ ಸೋತ ಬಳಿಕ ಎಕ್ಸ್ ನಲ್ಲಿ ಬರೆದುಕೊಂಡಿರುವ ಮಾಡಿದ ನಟಿ, ಬಾಂಗ್ಲಾ ಟೈಗರ್ಸ್ ಚೆನ್ನಾಗಿ ಆಡಿದ್ದೀರಿ. ಭಾರತದ ವಿರುದ್ಧ ಕನಿಷ್ಠ ಪಕ್ಷ ಅವರದ್ದೇ ನೆಲದಲ್ಲಿ ಒಳ್ಳೆಯ ಸವಾಲು ನೀಡಿದ್ದೀರಿ ಎಂದು ಹೊಗಳಿದ್ದಾಳೆ. ಶಿನ್ವಾರಿ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಭಾರತೀಯ ಕ್ರೀಡಾಭಿಮಾನಿಗಳು ಪಾಕ್ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
Advertisement
Advertisement
ಶಿನ್ವಾರಿ ಆಫರ್ ಏನು?: ಇನ್ ಶಾ ಅಲ್ಲಾ, ನನ್ನ ಬಾಂಗ್ಲಾ ಬಂಧು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿ. ಆಗ ನಾನು ಢಾಕಾಗೆ ಭೇಟಿ ನೀಡಿ ಅಲ್ಲಿ ಬೆಂಗಾಲಿ ಹುಡುಗರೊಂದಿಗೆ ಡಿನ್ನರ್ ಡೇಟ್ ಮಾಡುವೆ ಎಂದು ಶಿನ್ವಾರಿ ಆಫರ್ ನೀಡಿದ್ದಳು. ಅಲ್ಲದೆ ಭಾರತ ತಂಡ ವಿಶ್ವಕಪ್‍ನಲ್ಲಿ (Worldcup 2023) ಸೆಮಿಫೈನಲ್‍ನಲ್ಲೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಳು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್‍ನಲ್ಲಿ ಆಡಲಿವೆ ಎಂದಿದ್ದಾಳೆ. ಜೊತೆಗೆ ಪಾಕ್ ತಂಡ ವಿಶ್ವಕಪ್ ಎತ್ತಿಹಿಡಿಯುವ ಕನಸನ್ನೂ ಹಂಚಿಕೊಂಡಿದ್ದಳು.
Advertisement
InshAllah my Bangali Bandu will avenge us in the next match. I will go to dhaka and have a fish dinner date with Bangali boy if their team managed to beat India ✌️❤️ ????????
— Sehar Shinwari (@SeharShinwari) October 15, 2023
ಬಾಂಗ್ಲಾ ವಿರುದ್ಧ ಭಾರತ ಗೆಲುವು: ವಿರಾಟ್ ಕೊಹ್ಲಿ ಅಜೇಯ ಶತಕ, ಶುಭಮನ್ ಗಿಲ್ ಅರ್ಧಶತಕ, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾದೇಶದ ವಿರುದ್ಧ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 48ನೇ ಶತಕ ಸಿಡಿಸಿದ ವಿರಾಟ್, 26 ಸಾವಿರ ಅಂತಾರಾಷ್ಟ್ರೀಯ ರನ್‍ಗಳಮನ್ನೂ ಪೂರೈಸಿದ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ. ಜೊತೆಗೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 78ನೇ ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತ್ತು. 257ರನ್‍ಗಳ ಗುರಿ ಬೆನ್ನತ್ತಿದ್ದ ಭಾರತ 41.3 ಓವರ್‍ಗಳಲ್ಲೇ 3 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿ ಗೆಲುವು ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 4ನೇ ಗೆಲುವು ತನ್ನದಾಗಿಸಿಕೊಂಡಿತು.
Web Stories