ಇಸ್ಲಾಮಾಬಾದ್: ಉಗ್ರವಾದಕ್ಕೆ ಬೆಂಬಲ ನೀಡಿ ಭಾರತದ ದಾಳಿಗೆ ಕಾರಣವಾಗಿದ್ದ ಪಾಕಿಸ್ತಾನ ಕರಾಳ ಮುಖವನ್ನು ವಿಶ್ವಕ್ಕೆ ಭಾರತ ತೆರೆದಿಡುತ್ತಿದಂತೆ ದೇಶದೊಳಗಿನ ಭಯೋತ್ಪಾದನ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಪಾಕಿಸ್ತಾನದಿಂದಲೇ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಜೈಶ್ ಎ ಮೊಹಮದ್ ಸಂಘಟನೆ ಪ್ರಧಾನ ಕಾರ್ಯ ಸ್ಥಳವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದೆ. ಜೈಶ್ ಸಂಘಟನೆಯ ಪ್ರಧಾನ ಕೇಂದ್ರ ಸ್ಥಳದಲ್ಲಿ 70 ತಜ್ಞ ಬೋಧಕ ವರ್ಗ, 600 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಸಂಬಂಧ ಪಾಕಿಸ್ತಾನ ಸಚಿವಾಲಯದ ವಕ್ತಾರರೊಬ್ಬರ ಹೇಳಿಕೆ ಬಿಡುಗಡೆ ಆಗಿದ್ದು, ಪಂಜಾಬ್ ಸರ್ಕಾರ ಜೈಶ್ ಎ ಮೊಹಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಕ್ಯಾಂಪಸ್ನಲ್ಲಿರುವ ಮದ್ರಸೆತುಲ್ ಸಬೀರ್ ಮತ್ತು ಜಮಾ ಇ ಮಸ್ಜಿದ್ ಸುಬಾನಲ್ಲಾ ಅನ್ನು ನಿಯಂತ್ರಣಕ್ಕೆ ಪಡೆಯಲಾಗಿದ್ದು, ಇದರ ವ್ಯವಹಾರಗಳನ್ನು ನೋಡಿಕೊಳ್ಳಲು ನಿರ್ವಹಾಕರನ್ನು ನೇಮಕ ಮಾಡಿದೆ. ಸದ್ಯ ಕೇಂದ್ರ ಪಂಜಾಬ್ ಸರ್ಕಾರದ ಪೊಲೀಸರ ವಶದಲ್ಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನು ಓದಿ: ಮತ್ತೊಂದು ಗೆಲುವು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮಾನ ಮತ್ತೊಮ್ಮೆ ಹರಾಜು!
ಜೈಶ್ ಎ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ ಆಗಿದ್ದು, ಈತನೇ ಪುಲ್ವಾಮಾ ದಾಳಿಯ ಹಿಂದಿನ ಮಸ್ಟರ್ ಮೈಡ್ ಆಗಿದ್ದ. ಸದ್ಯ ಮಸೂದ್ ರಾವಲ್ಪಿಂಡಿಯಲ್ಲಿರೋ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಪಾಕ್ ಮಿಲಿಟರಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದನೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv


