ಇಸ್ಲಾಮಬಾದ್: ರಾಜಕಾರಣಿ ಸಂಬಂಧಿಯ ಕಾರ್ ಓವರ್‌ಟೇಕ್ ಮಾಡಿದಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಭಾನುವಾರ ಸಂಜೆ ರಾಜಕಾರಣಿಯ ಸಂಬಂಧಿಕರು ಮತ್ತು ಅವರ ಸಹಚರರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಹಿಂದೂ ಕುಟುಂಬದವರು ಕಾರನ್ನು ಓವರ್ಟೇಕ್ ಮಾಡಿದ್ದಾರೆ. ಈ ಹಿನ್ನೆಲೆ ಸಿಟ್ಟಿಗೆದ್ದ ರಾಜಕಾರಣಿ ಸಂಬಂಧಿಗಳ ಗ್ಯಾಂಗ್ ಹಿಂದೂ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಆ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಿಯರನ್ನು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ. ಇದನ್ನೂ ಓದಿ: ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!
Advertisement
Advertisement
ನಡೆದಿದ್ದೇನು?
ಸಿಂಧ್‍ನ ಕುಟುಂಬವು ಒಬ್ಬ ಪುರುಷ, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಕಾರಿನಲ್ಲಿ ಹೋಗುತ್ತಿದ್ದರು. ಮೀರ್‍ಪುರ್ ಮಾಥೆಲೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋಟ್ಕಿ ಬಳಿಯ ರೆಸ್ಟೋರೆಂಟ್‍ನಲ್ಲಿ ರಹರ್ಕಿ ಸಾಹಿಬ್ ಎಂಬ ಪ್ರದೇಶದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಅವರ ಮೇಲೆ ರಾಜಕಾರಣಿ ಸಂಬಂಧಿ ದಾಳಿ ಮಾಡಿದ್ದಾನೆ.
Advertisement
ಸ್ಥಳೀಯ ರಾಜಕಾರಣಿಯೊಬ್ಬರ ಸೋದರಸಂಬಂಧಿ ಶಂಶೇರ್ ಪಿತಾಫಿ ಅವರ ವಾಹನವನ್ನು ಅಡ್ಡಗಟ್ಟಲು ಯತ್ನಿಸಿದರೂ ಪದೇ ಪದೇ ನಾವು ಅವರನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗುತ್ತಿದ್ದೆವು. ಆದರೂ ಅವರು ನಮ್ಮನ್ನು ಹಿಂದಿಕ್ಕಿ, ನಮ್ಮ ಕಾರನ್ನು ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಹೆದ್ದಾರಿಯಲ್ಲಿ ಕುಟುಂಬದವರ ಕಾರಿನಲ್ಲಿ ಬರಬೇಕಾದ್ರೆ ಎದುರಿದ್ದ ಕಾರನ್ನು ಓವರ್ಟೇಕ್ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮಕ್ಕಳಲ್ಲೊಬ್ಬರು ಐಸ್ ಕ್ರೀಮ್ ಪೇಪರ್‌ನ್ನು ಹೊರಗೆ ಎಸೆದರು. ಅದು ಕಾರಿನ ವಿಂಡ್‍ಶೀಲ್ಡ್‍ಗೆ ಅಪ್ಪಳಿಸಿತು. ಇದರಿಂದ ಕೋಪಗೊಂಡಿದ್ದು, ಆ ಕಾರನ್ನು ಓವರ್ಟೇಕ್ ಮಾಡಿದ್ದಾರೆ. ಆದರೆ ಅವರು ನಿಲ್ಲಿಸದೇ ಅಲ್ಲಿಂದ ವೇಗವಾಗಿ ಹೋಗಿದ್ದಾರೆ ಎಂದು ವಿವರಿಸಿದರು.
ಆದರೂ ಅವರ ಕುಟುಂಬವನ್ನು ಬಿಡದ ಇವರು, ಅವರನ್ನು ಹಿಂಬಾಲಿಸಿಕೊಂಡು ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಸುಮಾರು 12 ಪುರುಷರು ಕಾರನ್ನು ಒಡೆದು ಕಾರಿನಲ್ಲಿದ್ದ ಅಜಯ್‍ಕುಮಾರ್‌ಗೆ ಗಾಯಗೊಳಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಾಗಿದ್ದು, ದಾಳಿಕೋರರನ್ನು ಬಂಧಿಸಲಾಗುವುದು ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ
ಮುಖ್ಯ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದರೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.