– ಮೆಲ್ಬರ್ನ್ ಸೇರಿ ವಿದೇಶದ ಹಲವೆಡೆ ಪಹಲ್ಗಾಮ್ ಘಟನೆ ಖಂಡಿಸಿ ಪ್ರತಿಭಟನೆ
ಲಂಡನ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ, ಖಂಡನೆಗಳು ವ್ಯಕ್ತವಾಗ್ತಿವೆ. ಬೇರೆ ದೇಶಗಳಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗೆಯೇ ಲಂಡನ್ (London) ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ಮಾಡುವಾಗ ಪಾಕ್ ರಾಯಭಾರಿ ಅಧಿಕಾರಿ ತೈಮೂರ್ ರಾಹತ್ ಪ್ರಚೋದನೆ ನೀಡಿದ್ದಾನೆ.
50 shades of Hafiz Saeed:
From Mullah-General Asim Munir to Pak Defence Attache in London.
The mask is off: reality of #Pakistan for the world to see…
Eye opener for the #amankiasha wallahs…
* Not our job to strengthen democratic forces in Pak.
* Ek Naagnath
Ek SaanpNath pic.twitter.com/Fvlyv8jAGy
— GAURAV C SAWANT (@gauravcsawant) April 26, 2025
ಅಭಿನಂದನ್ ವರ್ಧಮಾನ್ ಫೋಟೋ ಇರುವ ಪೋಸ್ಟರ್ ಹಿಡಿದುಕೊಂಡು ಕತ್ತು ಕೊಯ್ಯುತ್ತೇವೆ ಎಂದು ಸನ್ನೆ ಮಾಡಿ ತೋರಿಸಿದ್ದಾನೆ. ಇದಕ್ಕೆ ಪ್ರತಿಭಟನಾಕಾರರು ಸ್ಥಳದಲ್ಲೇ ತಿರುಗೇಟು ಕೊಟ್ಟಿದ್ದಾರೆ. ನಿಮಗೂ ತೊಳೆದುಕೊಳ್ಳಲು ನೀರು ಇರಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್
ಮತ್ತೊಂದು ಭಯಾನಕ ವಿಡಿಯೋ ವೈರಲ್
ಈ ಮಧ್ಯೆ, ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ಮತ್ತೊಂದು ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಗೆ ಉಗ್ರ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡಿ, ಬಳಿಕ ಜನಸಮುದಾದತ್ತ ತೆರಳಿ ಅಲ್ಲಿ ರಕ್ತಪಾತ ನಡೆಸಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ
ಆ ಉಗ್ರ ಮತ್ತೆ ಮುಂದೆ ಹೋಗಿ ಅಲ್ಲಿದ್ದ ಜನಸಮೂಹದ ಮೇಲೆ ಗುಂಡಿನ ದಾಳಿ ಮಾಡುತ್ತಾನೆ. ದಾಳಿ ವೇಳೆ ಕೆಲ ಮಕ್ಕಳು ಆಟವಾಡುತ್ತಿರುವುದು, ಚೀರಾಟ, ಕೂಗಾಟದ ಸದ್ದು ಕೇಳಿಬರುತ್ತದೆ. ಉಗ್ರರು ದಟ್ಟ ಕಾನನ ಮಧ್ಯೆ ಬಂದು ಗಿಡಗಳಿಂದ ಇಳಿದು ದಾಳಿ ನಡೆಸಿರೋದು ಗೊತ್ತಾಗಿದೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಇನ್ನೂ ಶಂಕಿತ ಉಗ್ರ ಆದಿಲ್ 2018ರಲ್ಲಿ ಪಾಕಿಸ್ಥಾನಕ್ಕೆ ಸ್ಟೂಡೆಂಟ್ ವೀಸಾದಲ್ಲಿ ಹೋಗಿ, 2024ಕ್ಕೆ ನಾಲ್ವರು ಉಗ್ರರೊಂದಿಗೆ ವಾಪಸ್ಸಾಗಿ ಈ ದಾಳಿ ನಡೆಸಿರೋದು ಗೊತ್ತಾಗಿದೆ. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.