ಇಸ್ಲಾಮಾಬಾದ್: ಸಚಿವರು ಇನ್ಮುಂದೆ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವಂತಿಲ್ಲ. ಅಷ್ಟೇ ಅಲ್ಲದೇ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ (Pakistan Government) ಸೂಚನೆ ನೀಡಿದೆ.
ತಮ್ಮ ಸಂಬಳವನ್ನು ಕಡಿತ ಮಾಡಲು ಒಪ್ಪಿಕೊಂಡಿದ್ದಕ್ಕೆ ಸಚಿವರಿಗೆ ಧನ್ಯವಾದಗಳು ಎಂದು ಸರ್ಕಾರ ಹೇಳಿದೆ. ಹಣದುಬ್ಬರ, ಸಾಲದ ಹೊರೆ ತಪ್ಪಿಸಲು ವೆಚ್ಚ ಕಡಿತದ ಕ್ರಮಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಜುಲೈನಲ್ಲಿ ಮುಂದಿನ ಬಜೆಟ್‌ನಲ್ಲಿ ಸರ್ಕಾರವು ಮತ್ತಷ್ಟು ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧಕ್ಕೆ 1 ವರ್ಷ – ಮತದಾನದಿಂದ ದೂರ ಉಳಿದ ಭಾರತ
ಇಸ್ಲಾಮಾಬಾದ್‌ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಮಾತನಾಡಿದ ಅವರು, ಇದು ಈ ಸಮಯದ ಅಗತ್ಯವಾಗಿದೆ. ಸಮಯವು ನಮ್ಮಿಂದ ಸಂಯಮ, ಸರಳತೆ ಮತ್ತು ತ್ಯಾಗವನ್ನು ಬಯಸಿದೆ ಎಂದು ಷರೀಫ್ ತಿಳಿಸಿದ್ದಾರೆ. ಇದನ್ನೂ ಓದಿ: Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 5ನೇ ರಾಷ್ಟ್ರವಾಗಿರುವ ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶದ ದುರ್ಬಲ ಪರಿಸ್ಥಿತಿ ವಿರುದ್ಧ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಿಕಟ್ಟಿನ ಸನ್ನಿವೇಶ ನಿಭಾಯಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳಲ್ಲದೆ ಹಲವಾರು ಫೆಡರಲ್ ಮತ್ತು ರಾಜ್ಯ ಸಚಿವರು ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ತ್ಯಜಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಷರೀಫ್ ಹೇಳಿದರು. ಮುಂದಿನ ವರ್ಷದವರೆಗೆ ಐಷಾರಾಮಿ ವಸ್ತುಗಳು ಮತ್ತು ಕಾರುಗಳ ಖರೀದಿಯನ್ನು ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) 2022ರ ಆರಂಭದಿಂದ ಬೆಂಚ್‌ಮಾರ್ಕ್ ದರವನ್ನು 725 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. SBP ತನ್ನ ಮುಂದಿನ ನೀತಿ ಪರಾಮರ್ಶೆಯನ್ನು ಮಾರ್ಚ್ 16 ರಂದು ನಡೆಸಲಿದೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k