ಇಸ್ಲಾಮಾಬಾದ್: ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಿನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.
ರಾವಲ್ಪಿಂಡಿಯಲ್ಲಿ ಕಾಶ್ಮೀರ ವಿಚಾರವಾಗಿ ಮಾತನಾಡಿದ ಪಾಕ್ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್, ಈ ಬಾರಿಯ ಯುದ್ಧದ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಲಿದೆ ಅಂತ ಹೇಳಿಕೆ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್
Advertisement
ವಿಶ್ವಸಂಸ್ಥೆ ನಿಜವಾಗಿಯೂ ಈ ಸಮಸ್ಯೆಯನ್ನು ಬಗೆಹರಿಸಲು ಬಯಸಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ಕಾಶ್ಮೀರ ವಿಚಾರವಾಗಿ ಮೌನವಾಗಿರುವ ಮುಸ್ಲಿಂ ದೇಶಗಳ ವಿರುದ್ಧವೂ ಸಚಿವರು ಅಸಮಾಧಾನ ಹೊರಹಾಕಿದ್ದಾರೆ.
Advertisement
Pakistan media: Railways Minister Sheikh Rashid Ahmed has predicted that a full-blow war between Pakistan and India is “likely to occur in October or the following month.” (file pic) pic.twitter.com/rWnvi8xZqE
— ANI (@ANI) August 28, 2019
Advertisement
ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಇನ್ನೂ ಮಾತುಕತೆ ಯೋಚಿಸುವವರು ಮೂರ್ಖರು. ಕಾಶ್ಮೀರ ವಿಚಾರ ಬಂದಾಗ ಚೀನಾ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ಸೆಪ್ಟಂಬರ್ 27ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಭಾಷಣ ಮಾಡಲಿದ್ದಾರೆ. ಚೀನಾದ ನಮ್ಮೊಂದಿಗೆ ನಿಂತಿರುವುದು ನಮ್ಮ ಅದೃಷ್ಟ ಎಂದು ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
Advertisement
ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಬಾಂಬ್ ದಾಳಿ ಆಗಬಹುದು ಎಂದು ರಶೀದ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ದೇಶ ವಿಭಜನೆಯಾದಾಗಿನಿಂದ ಭಾರತ-ಪಾಕ್ 1965 ಮತ್ತು 1971ರಲ್ಲಿ ಎರಡು ಬಾರಿ ಯುದ್ಧ ಮಾಡಿವೆ. ನಮ್ಮ ಭೂಪ್ರದೇಶದಿಂದ ಒಳನುಸುಳುವವರನ್ನು ಹೊರಹಾಕಲು 1999ರ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನಡೆದಿತ್ತು. ಈ ಮೂರು ಬಗೆಯ ಯುದ್ಧಗಳಲ್ಲಿಯೂ ಪಾಕಿಸ್ತಾನ ಸೇನೆಯನ್ನು ಭಾರತ ಹಿಮ್ಮೆಟ್ಟಿತ್ತು.