ಇಸ್ಲಾಮಾಬಾದ್: ಲೈವ್‍ನಲ್ಲಿ ಮಾತನಾಡುತ್ತಿದ್ದ ವೇಳೆ ಅನುಚಿತವಾಗಿ ವರ್ತಿಸಿದ ಬಾಲಕನಿಗೆ ಮಹಿಳಾ ಪತ್ರಕರ್ತೆಯೊಬ್ಬರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ (ಜುಲೈ 9)ರಂದು ರಂಜಾನ್ ಹಬ್ಬ ಆಚರಣೆಯ ಬಗ್ಗೆ ಪತ್ರಕರ್ತೆ ವರದಿ ಮಾಡುತ್ತಿದ್ದರು. ಈ ವೇಳೆ ಚೇಷ್ಟೆ ಮಾಡಿದ ಬಾಲಕನಿಗೆ ಪ್ರತಕರ್ತೆ ಕೆನ್ನೆಗೆ ಬಾರಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್- ಯುವಕನ ಹತ್ಯೆ
Advertisement
????????? pic.twitter.com/Vlojdq3bYO
— مومنہ (@ItxMeKarma) July 11, 2022
Advertisement
ವೀಡಿಯೋದಲ್ಲಿ ಪತ್ರಕರ್ತೆಯ ಸುತ್ತಾಮುತ್ತಾ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕೆಲವು ಮಂದಿ ನಿಂತಿದ್ದರು. ಈ ವೇಳೆ ಬಿಳಿ ಶರ್ಟ್ ಧರಿಸಿದ್ದ ಬಾಲಕ ಪತ್ರಕರ್ತೆಯ ಸಮೀಪವೇ ನಿಂತಿರುತ್ತಾನೆ. ಕ್ಯಾಮೆರಾ ಮುಂದೆ ನಿಂತು ಪತ್ರಕರ್ತೆ ವರದಿ ಮಾಡುತ್ತಿದ್ದಾಗ ಬಾಲಕ ತನ್ನ ಕೈಯನ್ನು ಎತ್ತಿ ಇನ್ನೊಬ್ಬ ಹುಡುಗನನ್ನು ಕರೆಯುತ್ತಾನೆ. ಲೈವ್ ವೇಳೆ ಕ್ಯಾಮೆರಾ ಮುಂದೆ ಸನ್ನೆ ಮಾಡಿದ್ದರಿಂದ ಕೋಪಗೊಂಡ ಪತ್ರಕರ್ತೆ ಬಾಲಕನ ಕಪಾಳಕ್ಕೆ ಹೊಡೆದಿದ್ದಾರೆ.
Advertisement
Advertisement
ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಈ ವೀಡಿಯೋವನ್ನು ಸುಮಾರು 4,00,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ