ಇಸ್ಲಮಾಬಾದ್: ಭಾರತ ನಮ್ಮ ಮೇಲೆ ಏಪ್ರಿಲ್ 16ರಿಂದ 20ರೊಳಗೆ ದಾಳಿ ನಡೆಸಲು ಸಂಚು ರೂಪಿಸಿರುವ ಬಗೆ ನಿಖರ ಮಾಹಿತಿ ಲಭ್ಯವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಹೇಳಿದ್ದಾರೆ.
ಮುಲ್ತಾನ್‍ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ ನಮ್ಮ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ವೇಳೆ ದಾಳಿ ಎಲ್ಲಿ ಮತ್ತು ಯಾವಾಗ ನಡೆಯುತ್ತೆ ಎಂಬುದರ ಮಾಹಿತಿಯನ್ನು ನೀಡಿಲ್ಲ. ಪ್ರಧಾನಿ ಈ ವಿಷಯಕ್ಕೆ ಸಂಬಂಧಿಸಿದ ವಿಷಯವನ್ನು ದೇಶದ ಜನತೆಯೊಂದಿಗೆ ಶೀಘ್ರವೇ ಹಂಚಿಕೊಳ್ಳಲಿದ್ದು, ಎಲ್ಲವನ್ನು ಅವರೇ ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಫೆಬ್ರವರಿ 14ರಂದು ಪಾಕ್ ಪೋಷಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಸಿಆರ್‍ಪಿಎಫ್ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ. ದಾಳಿಯ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ದಾಳಿ ನಡೆಸಿ ಉಗ್ರರ ಸೇನಾ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿಯಲ್ಲಿ ಸುಮಾರು 200ಕ್ಕೂ ಅಧಿಕ ಉಗ್ರರು ಹತರಾಗಿದ್ದರು. ವಾಯ ದಾಳಿಯ ಬಳಿಕ ಪಾಕಿಸ್ತಾನ ತನ್ನ 11 ವಾಯು ಮಾರ್ಗಗಳನ್ನು ಬಂದ್ ಮಾಡಿಕೊಂಡಿತ್ತು. ಶನಿವಾರ ಬೇರೆ ದಾರಿ ಕಾಣದೆ ತನ್ನ ವಾಯು ಮಾರ್ಗವನ್ನು ಹಾರಾಟಕ್ಕೆ ಪಾಕಿಸ್ತಾನ ಮುಕ್ತ ಮಾಡಿದೆ.
Advertisement
ಶನಿವಾರ ಅಮೆರಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬಿಜೆಪಿ ಎಫ್-16 ವಿಮಾನವನ್ನು ಹೊಡೆದುರುಳಿಸಿದೆ ಎಂದು ಸುಳ್ಳು ಹೇಳುವ ಮೂಲಕ ಗಡಿ ಭಾಗದಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಸಲು ಪ್ರಯತ್ನ ಮಾಡುತ್ತಿದೆ ಎಂದು ತಮ್ಮ ಮೊಂಡುವಾದ ಮಂಡಿಸಿದ್ದರು. ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಪಾಕಿಸ್ತಾನದ ದೊಡ್ಡ ಯುದ್ಧ ವಿಮಾನ (ಎಫ್-16) ನಾಪತ್ತೆಯಾಗಿಲ್ಲ ಎಂದು ಹೇಳಿದ್ದರು.
Advertisement
ವಾಯು ದಾಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಎಷ್ಟೇ ಸಾಕ್ಷ್ಯಗಳನ್ನು ನೀಡಿದರೂ ಪಾಕ್ ಮಾತ್ರ ತನ್ನ ಭಾಗದಲ್ಲಿ ಏನೇನೂ ಆಗಿಲ್ಲ ಎಂದು ಹೇಳಿಕೊಂಡು ಬರುತ್ತಿದೆ.