ಇಸ್ಲಾಮಾಬಾದ್: ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಬಂಡವಾಳ ಮತ್ತೆ ಬಯಲಾಗಿದೆ.
ಭಾರತ ನಡೆಸಿದ ದಾಳಿ ಪಾಕಿಸ್ತಾನ (Pakistan) ಪ್ರತಿ ದಾಳಿ ನಡೆಸಿ ಮೂವರನ್ನುಸೆರೆ ಹಿಡಿದಿದ್ದೇವೆ ಎಂದು ಖವಾಜಾ ಆಸಿಫ್ ಹೇಳಿದ್ದರು. ಆದರೆ ಈಗ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದು ಪಾಕಿಸ್ತಾನ ಭಾರತದ ಸೈನಿಕರನ್ನು ಸೆರೆ ಹಿಡಿದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:9 ಉಗ್ರರ ನೆಲೆಗಳು ಉಡೀಸ್- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?
ಪದೇ ಪದೇ ಭಾರತವನ್ನು ಕೆಣಕಿದ್ದ ಆಸಿಫ್, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದರೆ ಮತ್ತು ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಈ ಜಗತ್ತಿನಲ್ಲಿ ಯಾರೂ ಉಳಿಯುವುದಿಲ್ಲ ಎಂದಿದ್ದರು.
ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು ಧ್ವಂಸಗೊಳಿಸಲಿದೆ ಎಂದು ಹೇಳಿದ್ದರು.
ಭಾರತ ತಡ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.