ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇತ್ತೀಚೆಗೆ ವೆಬ್ ಸಿರೀಸ್ ರಂಗದಲ್ಲಿ ಪ್ರವೇಶ ಮಾಡಿರುವ ಸಂಗತಿ ಎಲ್ಲಿರಗೂ ತಿಳಿದಿದೆ. ಸದ್ಯ ಶಾರುಖ್ ನಿರ್ಮಾಣ ಮಾಡುತ್ತಿರುವ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್‍ನ ಟ್ರೈಲರ್ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಶಾರುಖ್ ಖಾನ್ ವಿರುದ್ಧ ಕಿರಿಕಾರಿ ಪಾಕಿಸ್ತಾನ ಆರ್ಮಿ ಮುಖ್ಯ ವಕ್ತಾರ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.
ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಆಸೀಫ್ ಗಫೂರ್, ನೀವು ಇನ್ನು ಬಾಲಿವುಡ್ ಭ್ರಮೆಯಲ್ಲಿ ಜೀವಿಸುತ್ತಿದ್ದೀರಿ. ಆದರೆ ರಿಯಾಲಿಟಿ ನೋಡಬೇಕಾದರೆ ರಾ, ಗೂಢಾಚಾರಿ ಕುಲ ಭೂಷಣ್ ಜಾಧವ್, ವಿಂಗ್ ಕಮಾಂಡರ್ ಅಭಿನಂದನ್, 27 ಫೆ.2019 ಭಾರತ-ಪಾಕಿಸ್ತಾನ್ ಬಾರ್ಡರ್ ವಿಚಾರಗಳನ್ನು ಗಮನಿಸಿ. ನೀವು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ಧ್ವನಿ ಎತ್ತಿ ಶಾಂತಿ ಕಾಪಾಡಿ ಎಂದು ಶಾರುಖ್ ಖಾನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
Advertisement
The trailer of our first @netflix series #BardOfBlood is here. A thrilling tale of espionage, vengeance, love and duty. Hope u enjoy it…@NetflixIndia @RedChilliesEnt @emraanhashmi @_GauravVerma @BilalS158 @ribhudasgupta pic.twitter.com/aftLjq3BA1
— Shah Rukh Khan (@iamsrk) August 22, 2019
Advertisement
ಬೇಹುಗಾರಿಕಾ ಹಿನ್ನೆಲೆಯಲ್ಲಿ ಬರುತ್ತಿರುವ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್‍ನಲ್ಲಿ ಇಮ್ರಾನ್ ಹಷ್ಮಿ, ವಿನಿತ್ ಕುಮಾರ್ ಸಿಂಗ್, ಶೋಭಿತಾ ಧುಲಿಪಾಲ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸಿರೀಸ್ ಬಿಲಾಲ್ ಸಿದ್ದಿಖಿ ಬರೆದಿರುವ ಪುಸ್ತಕದ ಆಧಾರವಾಗಿ ನಿರ್ಮಾಣ ಮಾಡಲಾಗಿದೆ. ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ.
Advertisement
ವೆಬ್ ಸಿರೀಸ್‍ನ ಟ್ರೈಲರ್ ಬಿಡುಗಡೆ ಮಾಡಿ ಟ್ವೀಟ್ ಮಾಡಿದ್ದ ಶಾರುಖ್ ಖಾನ್, ಗೂಢಾಚಾರ್ಯೆ, ಪ್ರತಿಕಾರ, ಪ್ರೇಮ, ಕರ್ತವ್ಯ ನಿರ್ಮಾಣೆಯ ನಡುವೆ ಸಾಗುವ ಕಥೆಯಾಗಿದೆ ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Advertisement
ಈ ಟ್ರೈಲರ್ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ ಪ್ರದೇಶದಿಂದ ಆರಂಭವಾಗುತ್ತದೆ. ಭಾರತೀಯ ಬೇಹುಗಾರಿಕೆ ಸಂಸ್ಥೆ ‘ರಾ’ ಮಾಜಿ ಅಧಿಕಾರಿ ಕಬೀರ್ ಆನಂದ ಜೀವನ ಸುತ್ತ ನಡೆಯುವ ಕಥೆ ಇದಾಗಿದೆ. ಮುಂಬೈನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಸುತ್ತಿದ್ದ ಕಬೀರ್ ಆನಂದ್‍ಗೆ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಗೂಢಾಚಾರಿ ಆಗುವ ಅವಕಾಶ ಲಭಿಸಿ ಪಾಕ್‍ಗೆ ತೆರಳುತ್ತಾರೆ. ಇವರೊಂದಿಗೆ ಮತ್ತಿಬ್ಬರು ಕೂಡ ಕಬೀರ್ ರೊಂದಿಗೆ ತೆರಳುತ್ತಾರೆ. ಈ ರೆಸ್ಕ್ಯೂ ಕಮ್ ಸೂಸೈಡ್ ಮಿಷನ್‍ನಲ್ಲಿ ಮೂವರು ಮಾಡಿರುವ ಸಹಾಸ ಪ್ರಯಾಣವೇ ‘ಬಾರ್ಡ್ ಆಫ್ ಬ್ಲಡ್’ ಸಿರೀಸ್ ಆಗಿದೆ.