ಇಸ್ಲಾಮಾಬಾದ್: ಶನಿವಾರ ನರೇಂದ್ರ ಮೋದಿ ತಮ್ಮ ನೂತನ ಸಂಸದರನ್ನು ಉದ್ದೇಶಿಸಿ ಸಭೆ ಮಾಡಿದ್ದರು. ಈ ವೇಳೆ ಅವರು ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ ಪಾಕಿಸ್ತಾನದ ಮೀಡಿಯಾ ಮಿಂಗ್ ಕಮಾಂಡರ್ ಅಭಿನಂದನ್ ಎಂದು ತಿಳಿದು ಟ್ರೋಲ್‍ಗೆ ಒಳಗಾಗಿದ್ದಾರೆ.
ಭಾರತದ ಚುನಾವಣೆಯ ಮೇಲೆ ವಿಶ್ವದ ಅನೇಕ ದೇಶಗಳು ಗಮನ ಕೇಂದ್ರಿಕರಿಸಿದ್ದವು. ಚುನಾವಣೆ ಯಶಸ್ವಿಯಾಗಿ ನಡೆಸಲು ಚುನಾವಣಾ ಅಧಿಕಾರಿಗಳು, ಸೈನಿಕರು, ಸಿಬ್ಬಂದಿ ಶ್ರಮಿಸಿದ್ದರು. ಇದಕ್ಕೆ ಸಾಕ್ಷಿಯಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದರು.
Advertisement
Advertisement
ಮೋದಿ ತಮ್ಮ ಭಾಷಣದಲ್ಲಿ ಅಭಿನಂದನೆ ಪದವನ್ನು ಬಳಸಿದ್ದರು. ಇದನ್ನು ನೋಡಿದ ಪಾಕಿಸ್ತಾನದ ನಿರೂಪಕರೊಬ್ಬರು ಮೋದಿ ಅವರು ಚುನಾವಣೆ ಮುಗಿದ ನಂತರವೂ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದಿದ್ದಾರೆ.
Advertisement
ಪಾಕಿಸ್ತಾನ ನಿರೂಪಕನ ವಿಡಿಯೋವನ್ನು ಆಶೀಶ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ಅದಕ್ಕೆ, “ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದರೆ, ಪಾಕಿಸ್ತಾನದ ಮಾಧ್ಯಮದವರು ವಿಂಗ್ ಕಮಾಂಡರ್ ಅಭಿನಂದನ್ ಎಂದುಕೊಂಡಿದ್ದಾರೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಕೆಲವರು ಪಾಕಿಸ್ತಾನದವರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನು ಇನ್ನು ಮರೆತಿಲ್ಲ ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಜೋಕರ್ಸ್ ಎಂದು ಪಾಕಿಸ್ತಾನದ ಮೀಡಿಯಾವನ್ನು ಟ್ರೋಲ್ ಮಾಡುತ್ತಿದ್ದಾರೆ.
Pakistani Media Thinks PM Modi mentioning “Abhinandan” in his speech is actually Wing Commander Abhinandan
????????????????♂️ pic.twitter.com/YgpPODidCs
— Aashish (@kashmiriRefuge) May 24, 2019