ಗುವಾಹಟಿ : ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ದಾಖಲಿಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.
386 ಇನ್ನಿಂಗ್ಸ್ ಗಳಲ್ಲಿ 60 ಶತಕ ಸಿಡಿಸಿದ ದಾಖಲೆ ಹೆಗ್ಗಳಿಕೆ ಕೊಹ್ಲಿ ಪಡೆದಿದ್ದು, ಸಚಿನ್ ಅವರಗಿಂತ 40 ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ಸಿಡಿಸಿದ 36ನೇ ಶತಕ, ತವರು ನೆಲದಲ್ಲಿ 15ನೇ ಶತಕ ಹಾಗೂ ನಾಯಕನಾಗಿ 14ನೇ ಶತಕ ಇದಾಗಿದೆ.
Advertisement
HITMANNNN ????????@Paytm #INDvWI pic.twitter.com/v1E8OCwE8L
— BCCI (@BCCI) October 21, 2018
Advertisement
ದಾಖಲೆಯ ಜೊತೆಯಾಟ: ಆರಂಭದಿಂದಲೂ ಬಿರುಸಿನ ಆಟಕ್ಕೆ ಮುಂದಾದ ಕೊಹ್ಲಿ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. 88 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಅಲ್ಲದೇ ರೋಹಿತ್ ಶರ್ಮಾ ಅವರೊಂದಿಗೆ ದಾಖಲೆಯ ಜೊತೆಯಾಟ ನೀಡಿ ಸಚಿನ್, ಸೆಹ್ವಾಗ್ ದಿಗ್ಗಜರ ಸಾಲಿಗೆ ಸೇರಿದರು. ಕೊಹ್ಲಿ 107 ಎಸೆತಗಳಲ್ಲಿ 21 ಬೌಂಡರಿ, 2 ಸಿಕ್ಸರ್ ನೆರವಿನಿಂದ 140 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ ಶರ್ಮಾ 81 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
Advertisement
ಎರಡನೇ ವಿಕೆಟ್ ಗೆ 246 ರನ್ ಕೂಡಿ ಹಾಕಿದ ರೋಹಿತ್, ಕೊಹ್ಲಿ ಜೋಡಿ 8ನೇ ಬಾರಿಗೆ 100 ಪ್ಲಸ್ ರನ್ ಜೊತೆಯಾಟ ನೀಡಿದ ಸಾಧನೆ ಮಾಡಿದರು. ಸಚಿನ್, ಸೆಹ್ವಾಗ್ ಜೋಡಿಯೂ 8 ಬಾರಿ 100 ಪ್ಲಸ್ ರನ್ ಜೊತೆಯಾಟ ನೀಡಿದೆ. ಉಳಿದಂತೆ ಪಟ್ಟಿಯಲ್ಲಿ ಗಂಗೂಲಿ, ಸಚಿನ್ ಜೋಡಿ 26 ಬಾರಿ, ಶ್ರೀಲಂಕಾ ಆಟಗಾರ ದಿಲ್ಶಾನ್, ಕುಮಾರ ಸಂಗಕ್ಕರ ಜೋಡಿ 20 ಬಾರಿ, ಆಸೀಸ್ ನ ಅಡಂ ಗಿಲ್‍ಕ್ರಿಸ್ಟ್, ಮಾಥ್ಯೂ ಹೇಡನ್ ಜೋಡಿ 16 ಬಾರಿ ಶತಕದ ಜೋತೆಯಾಟ ನೀಡಿದೆ.
Advertisement
We love this sight ????
How about you?@Paytm #INDvWI #KingKohli #ViratKohli pic.twitter.com/UQL8wEollI
— BCCI (@BCCI) October 21, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv