ಆಂಸ್ಟರ್ಡ್ಯಾಮ್: ನೆದರ್ಲ್ಯಾಂಡ್ ವ್ಯಕ್ತಿಯೊಬ್ಬ ಕೇವಲ 75 ಯೂರೋ (6 ಸಾವಿರ ಸಾವಿರ)ಕ್ಕೆ ಚಿತ್ರಕಲೆಯನ್ನು ಖರೀದಿಸಿ ಅದನ್ನೂ ಬರೋಬ್ಬರಿ 30,000 ಯೂರೋ(24 ಲಕ್ಷ ರೂ.) ಮಾರಾಟ ಮಾಡಿದ್ದಾರೆ.
ಹೆಂಕ್ ಲಾರ್ಮನ್ಸ್ ಎಂಬವರು ಥ್ರಿಫ್ಟ್ ಅಂಗಡಿಯಲ್ಲಿ 75 ಯೂರೋಗಳನ್ನು ಕೊಟ್ಟು ಒಂದು ಪೇಂಟಿಂಗ್ ಖರೀದಿಸಿದ್ದರು. ಬಳಿಕ ಅದನ್ನು ಲಾರ್ಮನ್ಸ್ ತಜ್ಞರ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಗ ತಜ್ಞರು ಆ ಪೇಂಟಿಂಗ್ ಪರಿಶೀಲನೆ ಮಾಡಿ ಅದನ್ನು ಡಚ್ ಕಲಾವಿದ ಜೋಹಾನ್ ಆರ್ಟ್ಸ್ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಪೇಂಟಿಂಗ್ ತುಂಬಾ ಮೌಲ್ಯವಾದುದ್ದು ಎಂದು ತಿಳಿಸಿದ್ದಾರೆ.
Advertisement
ಪೇಂಟಿಂಗ್ ಮೌಲ್ಯವನ್ನು ತಿಳಿದ ಲಾರ್ಮನ್ಸ್ ಮತ್ತೆ ಅದೇ ಅಂಗಡಿಗೆ ಹೋಗಿದ್ದು, ಹರಾಜಿನ ಮೂಲಕ ಮಾರಾಟ ಮಾಡಿದ್ದಾರೆ. ಆಗ ಹರಾಜಿನಲ್ಲಿ ಈ ಪೇಂಟಿಂಗ್ 30,000 ಯುರೋಗೆ (25 ಲಕ್ಷ) ಮಾರಾಟವಾಗಿದೆ. ಈ ಪೇಂಟಿಂಗ್ ನಲ್ಲಿ ಮರ ಗಿಡಗಳಿದ್ದು, ಬಣ್ಣ ಬಣ್ಣದ ಚುಕ್ಕೆಗಳು, ಹೂವುಗಳು ಕಾಣಿಸುತ್ತದೆ.
Advertisement
ನೆದರ್ಲ್ಯಾಂಡ್ ನಲ್ಲಿ ವ್ಯಾನ್ ಗಾಗ್, ಟೂರೋಪ್, ವಿಲ್ಲ್ ಬ್ರೀಫ್ ಮತ್ತು ಆರ್ಟ್ಸ್ ಸೇರಿದಂತೆ ಕೆಲವರು ಈ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಈ ಪೇಂಟಿಂಗ್ ಗೆ 25 ಲಕ್ಷ ರೂ ಕೊಟ್ಟು ಡಚ್ ಸಂಗ್ರಾಹಕರೊಬ್ಬರು ಖರೀದಿಸಿದ್ದಾರೆ. ಈ ಪೇಂಟಿಂಗ್ ಮಾರಾಟ ಮಾಡಿದ ಲಾರ್ಮನ್ಸ್ ಗೆ ಊಹಿಸಲಾಗದಷ್ಟು ಲಾಭ ಬಂದಿದ್ದು, ಸಂತೋಷ ಪಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv