ಕೇಪ್‌ಟೌನ್: ಮಹಿಳಾ ವಿಶ್ವಕಪ್ ಟೂರ್ನಿಯ (ICC Womens World Cup) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಾಯಕಿ ಹರ್ಮನ್ ಪ್ರೀತ್‌ಕೌರ್ (Harmanpreet Kaur) ರನೌಟ್ ಭಾರೀ ಸದ್ದು ಮಾಡ್ತಿದೆ.
ಹೌದು. ಸರಿಯಾಗಿ ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ (England) ನಡೆದ ಏಕದಿನ ವಿಶ್ವಕಪ್ ವೇಳೆ ನೂಜಿಲ್ಯಾಂಡ್ (New Zealand) ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮಾಜಿ ನಾಯಕ ಧೋನಿ (MS Dhoni) ರನೌಟ್ ಆಗಿದ್ದರಿಂದ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು.
Advertisement
World cup semi final match jersey no “7” runout tough to forget.
7 – ???? – ????????#AUSvIND #INDWvsAUSW #WorldCup #Dhoni #HarmanpreetKaur #MSDhoni
Ms Dhoni ????& Harmanpreet Kaur???? ???? pic.twitter.com/JPWGqAgDKh
— Vishnu Dhoni (@vishnukumar2017) February 24, 2023
Advertisement
ಇದೀಗ 2023ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿಯೂ ಹರ್ಮನ್‌ಪ್ರೀತ್ ಕೌರ್ ರನೌಟ್ ಮತ್ತೆ ಎಂ.ಎಸ್ ಧೋನಿ ಅವರನ್ನ ನೆನಪಿಸಿದೆ. ಇದನ್ನೂ ಓದಿ: ವಿಶ್ವಕಪ್ ಕನಸು ಭಗ್ನ; ಭಾರತ ಮನೆಗೆ – ಆಸ್ಟ್ರೇಲಿಯಾ ಫೈನಲ್‌ಗೆ
Advertisement
2019ರಲ್ಲಿ ನಡೆದ ಪುರುಷರ ಏಕದಿನ ವಿಶ್ವ ಕಪ್ (ODI WoldCup) ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 10 ಎಸೆತಗಳಲ್ಲಿ 25 ರನ್ ಬೇಕಿದ್ದಾಗಲೇ ಮಾರ್ಟಿನ್ ಗಪ್ಟಿಲ್ ಎಸೆದ ಡೈರೆಕ್ಟ್ ವಿಕೆಟ್ ಥ್ರೋ ಗೆ ಧೋನಿ ರನೌಟ್ ಆಗಿದ್ದರು. ಈ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಅಲ್ಲದೇ ಅದು ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಆಗಿತ್ತು.
Advertisement
ಇದೀಗ ಮಹಿಳಾ ಕ್ರಿಕೆಟ್‌ನಲ್ಲಿಯೂ ಭಾರತಕ್ಕೆ ಇದೇ ರೀತಿಯ ನಿರಾಸೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ರನೌಟ್ ಟೀಂ ಇಂಡಿಯಾಗೆ ಮಾತ್ರಬಲ್ಲದೇ ಕ್ರಿಕೆಟ್ ಪ್ರೇಮಿಗಳಿಗೂ ಭಾರೀ ಆಘಾತವನ್ನುಂಟುಮಾಡಿದೆ. ಇದೀಗ ನೆಟ್ಟಿಗರು ಧೋನಿ ಮತ್ತು ಹರ್ಮನ್ ಪ್ರೀತ್ ಕೌರ್ ರನೌಟ್ ಆದ ವೀಡಿಯೋವನ್ನ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸೂರ್ಯಕುಮಾರ್ ದಂಪತಿ ಟೆಂಪಲ್ ರನ್ – ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗ
ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಎದುರಿಸಿತು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಜೆಮಿಮಾ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್ ಪ್ರೀತ್‌ಕೌರ್ ಬೌಂಡರಿಗಳ ಸುರಿಮಳೆಯೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು.
2023: Harmanpreet Kaur’s Bat stuck to the pitch in T20 WC Semifinal.
2017: Mithali Raj’s spikes got stuck to the pitch in ODI WC Final. (Jio Cinema)#CricketTwitter #HarmanpreetKaur #T20WorldCup #T20WomensWorldCup pic.twitter.com/5mhvQUeXFq
— The Third Man Cricket Show (@ThirdCricket) February 23, 2023
52 ರನ್‌ಗಳಿಸಿ ಆಟವಾಡುತ್ತಿದ್ದ ಹರ್ಮನ್ ಪ್ರೀತ್‌ಕೌರ್ 14.4ನೇ ಓವರ್‌ನಲ್ಲಿ ಎರಡು ರನ್ ಕದಿಯಲು ಯತ್ನಿಸಿ, ರನೌಟ್‌ಗೆ ತುತ್ತಾದರು. ಈ ಒಂದು ರನೌಟ್ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. ವಿಕೆಟ್ ಕಳೆದುಕೊಂಡು ಭಾವುಕರಾದ ಕೌರ್ ಮೈದಾನದಲ್ಲೇ ಬ್ಯಾಟ್ ಬಿಸಾಡಿದರು, ಬಳಿಕ ಅಸಮಾಧಾನದಿಂದಲೇ ಹೊರನಡೆದರು.
2017ರಲ್ಲಿಯೂ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ಇದೇ ರೀತಿ ರನೌಟ್‌ಗೆ ತುತ್ತಾಗಿದ್ದರು. ಆದಾಗ್ಯೂ ಭಾರತ ಅಂದು 186 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k