`ಪೈಲ್ವಾನ್’ ಬಾಕ್ಸಿಂಗ್ ಲುಕ್‍ಗೆ ಫ್ಯಾನ್ಸ್ ಫಿದಾ – ನಂಬಿದವರಿಗೆ ಥ್ಯಾಂಕ್ಸ್ ಹೇಳಿದ ಕಿಚ್ಚ

Public TV
2 Min Read
sudeep pailwan new

ಬೆಂಗಳೂರು: `ಪೈಲ್ವಾನ್’ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಬಾಕ್ಸಿಂಗ್ ಲುಕ್ ಹೇಗಿದೆ ಎನ್ನುವ ಅಭಿಮಾನಿಗಳ ಕುತೂಹಲ ತಣಿಸಲು ಇಂದು ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ರುವ ಕಿಚ್ಚನ ಕಟ್ಟುಮಸ್ತಾದ ಮೈಕಟ್ಟಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

ಕನ್ನಡ ಮಾತ್ರವಲ್ಲದೆ ಹಿಂದಿ, ತೆಲಗು, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಪೈಲ್ವಾನ್ ಚಿತ್ರ ತೆರೆಕಾಣಲಿದೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ಪೈಲ್ವಾನ್ ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಎಲ್ಲಾ 5 ಭಾಷೆಗಳಲ್ಲಿ ಪೈಲ್ವಾನ್ ಚಿತ್ರದ ಹೊಸ ಬಾಕ್ಸಿಂಗ್ ಲುಕ್‍ನಲ್ಲಿ ಸುದೀಪ್ ಮಿಂಚುತ್ತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಲೆಯಾಳಂ ನಟ ಮೋಹನ್‍ಲಾಲ್, ಬಾಲಿವುಡ್ ನಟ ಸುನೀಲ್ ಶೆಟ್ಟಿ, ತಮಿಳು ನಟ ವಿಜಯ್ ಸೇತುಪತಿ, ತೆಲಗು ನಟ ಚಿರಂಜೀವಿ ಹಾಗೂ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

sudeep pailwan

ಈ ಬಗ್ಗೆ ನಟ ವಿಜಯ್ ಸೇತುಪತಿ, ಮೋಹನ್ ಲಾಲ್, ಚಿತ್ರ ವಿಮರ್ಷಕ ತರಣ್ ಆದರ್ಶ್, ಸುನೀಲ್ ಶೆಟ್ಟಿ ಟ್ವೀಟ್ ಮಾಡಿ ಪೈಲ್ವಾನ್ ಚಿತ್ರಕ್ಕೆ ಹಾಗೂ ಸುದೀಪ್‍ಗೆ ಶುಭಶಯ ಕೋರಿದ್ದಾರೆ. ಜೊತೆಗೆ ಕಿಚ್ಚ ಕೂಡ ಚಿತ್ರದ ಹೊಸ ಬಾಕ್ಸಿಂಗ್ ಲುಕ್ ಪೋಸ್ಟರ್ ಅನ್ನು ಶೇರ್ ಮಾಡಿದಾರೆ.

ಟ್ವೀಟ್‍ನಲ್ಲಿ ಏನಿದೆ?
ನನ್ನನ್ನು ನಂಬಿದವರು ಹಾಗೂ ನಾನು ನಂಬಿದವರಿಗೆಲ್ಲಾ ತುಂಬಾ ಧನ್ಯವಾದ. ನಿಮ್ಮ ಅಪ್ಪುಗೆ ಮತ್ತು ಪ್ರೋತ್ಸಾಹ ನನಗೆ ಪ್ರೇರೆಪಿಸುತ್ತದೆ. ಪೈಲ್ವಾನ್ ಎಂದು ಬರೆದು ಸ್ಟನಿಂಗ್ ಬಾಕ್ಸಿಂಗ್ ಲುಕ್ ಪೋಸ್ಟರ್ ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಆಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಈ ಹಿಂದೆ ಸುದೀಪ್ ತಮ್ಮ ಬಾಡಿಯ ಬ್ಯಾಕ್ ಪೋಸ್ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಪೈಲ್ವಾನ್ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಈ ಪಾತ್ರಕ್ಕೆ ಅಂತಲೇ ಬರೋಬ್ಬರಿ 16 ಕೆ.ಜಿ. ತೂಕ ಇಳಿಸಿಕೊಂಡಿದ್ದಾರಂತೆ. ಹಾಗೆಯೇ ಕಿಚ್ಚ ತಮ್ಮ ಲೈಫ್ ನಲ್ಲೇ ಫಸ್ಟ್ ಟೈಂ ಈ ಚಿತ್ರಕ್ಕಾಗಿ ಜಿಮ್ ನಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಹೀಗಾಗಿ ಕಿಚ್ಚನ ಅಭಿಮಾನಿಗಳಲ್ಲಿ ಈ ಚಿತ್ರ ಭಾರೀ ಕುತೂಹಲ ಹುಟ್ಟಿಸಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

Share This Article