ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ಬಳಿಕ ಭಾರತದ (India) ವಿರುದ್ಧ ವಿಷ ಕಾರುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ(Turkey) ಬೆಂಬಲ ನೀಡಿದೆ.
ಯುದ್ಧ ಉಪಕರಣಗಳನ್ನು ಹೊತ್ತುಕೊಂಡು ಟರ್ಕಿಶ್ ವಾಯುಪಡೆಯ ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನವು ಭಾನುವಾರ ಕರಾಚಿಯಲ್ಲಿ ಲ್ಯಾಂಡ್ ಆಗಿದೆ.
ಕರಾಚಿಯನ್ನು ಹೊರತುಪಡಿಸಿ ಆರು ಟರ್ಕಿಶ್ ಸಿ -130 ವಿಮಾನಗಳು ಇಸ್ಲಾಮಾಬಾದ್ನ ಮಿಲಿಟರಿ ನೆಲೆಯಲ್ಲಿ ಬಂದಿಳಿದಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತ ತೊರೆಯದ ಪಾಕ್ ಪ್ರಜೆಗಳಿಗೆ 3 ವರ್ಷ ಜೈಲು, 3 ಲಕ್ಷ ದಂಡ
ಭಾರತದ ವಿಚಾರ ಬಂದಾಗ ಟರ್ಕಿ ಮೊದಲಿನಿಂದಲೂ ಪಾಕಿಸ್ತಾನದ ಪರವೇ ತನ್ನ ನಿರ್ಧಾರವನ್ನು ಪ್ರಕಟಿಸಿಕೊಂಡೇ ಬಂದಿದೆ. ವಿಶ್ವಸಂಸ್ಥೆಯಲ್ಲಿ ಪಾಕ್ ಪರವೇ ಮತವನ್ನು ಚಲಾಯಿಸುತ್ತಿದೆ.
ಎರಡು ವಾರಗಳ ಹಿಂದೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಟರ್ಕಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಹಿಂದೆ ಮದ್ದು ಗುಂಡುಗಳು, ಡ್ರೋನ್ ಸೇರಿದಂತೆ ಹಲವಾರು ರಕ್ಷಣಾ ಸಾಮಾಗ್ರಿಗಳನ್ನು ಟರ್ಕಿ ಪಾಕ್ಗೆ ಈ ಹಿಂದೆ ನೀಡಿತ್ತು.