– ಸಹಜ ಸ್ಥಿತಿಗೆ ಮರಳಿದ ಪಹಲ್ಗಾಮ್
ಶ್ರೀನಗರ: ಪಹಲ್ಗಾಮ್‌ನ (Pahalgam) ಬೈಸರನ್ ವ್ಯಾಲಿಯಲ್ಲಿ (Baisaran Valley) ಭಯೋತ್ಪಾದಕ ದಾಳಿಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳದ ಇನ್ನಷ್ಟು ವಿಡಿಯೋಗಳು ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ದಟ್ಟ ಕಾನನದಿಂದ ಒಳ ನುಸುಳಿದ ಉಗ್ರರು, ಮರದಿಂದ ಕೆಳಗಿಳಿದು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅನಂತನಾಗ್ ಜಿಲ್ಲೆಯಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರಿಗಾಗಿ ಕಾರ್ಯಾಚರಣೆ ನಡೆಸಿದೆ. ಸೇನಾ ಪಡೆಗಳು ಹುಡುಕಾಡುತ್ತಿವೆ. ಉಗ್ರರ ಸಂಪರ್ಕ ಹಾಗೂ ಹಣಕಾಸಿನ ನೆರವು ನೀಡಿದ್ದ ಅನುಮಾನದ ಮೇಲೆ 170 ಶಂಕಿತರ ವಿಚಾರಣೆ ನಡೆಸಿದೆ. ಇನ್ನು 14 ಉಗ್ರರ ಹೊಸ ಪಟ್ಟಿ ತಯಾರಾಗಿದ್ದು, ಲಷ್ಕರ್, ಜೈಷ್ ಇ ಮೊಹಮ್ಮದ್ ಸಂಘಟನೆಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ
ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಒಂದೊಂದು ದೃಶ್ಯಗಳು ಘೋರವಾಗಿದೆ. ಇನ್ನೂ ಕೂಡ ದಾಳಿಯ ಕುರುಹುಗಳು ಇವೆ. ತಾತ್ಕಾಲಿಕ ಟೆಂಟ್‌ನಲ್ಲಿನ ಹೋಟೆಲ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಇದನ್ನೂ ಓದಿ: ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ
ಸಹಜ ಸ್ಥಿತಿಗೆ ಬಂದ ಪಹಲ್ಗಾಮ್:
ಉಗ್ರರ ದಾಳಿಯ ಬಳಿಕ ಪೆಹಲ್ಗಾಮ್ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ರೀ ಓಪನ್ ಆಗಿವೆ. ಭದ್ರತೆ ಕಾರಣಕ್ಕೆ ಕಳೆದ ಎರಡು ದಿನಗಳಿಂದ ಇಡೀ ಪ್ರದೇಶ ಬಂದ್ ಆಗಿತ್ತು. ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಇದನ್ನೂ ಓದಿ: ನಾನು ಭಾರತದ ಸೊಸೆ, ಇಲ್ಲೇ ಇರುತ್ತೇನೆ: ಸೀಮಾ ಹೈದರ್
ಇನ್ನೂ, ಪ್ರವಾಸಿಗರಿಲ್ಲದೆ ಪಹಲ್ಗಾಮ್ ಬಿಕೋ ಎನ್ನುತ್ತಿದೆ. ಭಯೋತ್ಪಾದಕರ ದಾಳಿ ಬಳಿಕವೂ ಧೈರ್ಯವಾಗಿ ಪಹಲ್ಗಾಮ್‌ನಲ್ಲಿ ಕೆಲವರು ಪ್ರವಾಸ ಕೈಗೊಂಡಿದ್ದಾರೆ. ಪಹಲ್ಗಾಮ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೂರ್ ಮತ್ತೆ ಆರಂಭವಾಗಿದೆ. ಯಾರೂ ಭಯಪಡಬೇಡಿ, ಬನ್ನಿ ಎಂದು ಹಿರಿಯ ನಾಗರಿಕರು ಸ್ವಾಗತ ಮಾಡಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ