ನವದೆಹಲಿ: ಪಾಕಿಸ್ತಾನದ (Pakistan) ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸಯೀದ್ (Hafiz Saeed) ಪಾಕಿಸ್ತಾನದ ಭದ್ರತೆಯಲ್ಲಿರೋದು ಬಯಲಾಗಿದೆ.
ಪಹಲ್ಗಾಮ್ ಹತ್ಯಾಕಾಂಡದ (Pahalgam Terror Attack) ಕಿಂಗ್ ಪಿನ್ ಮಾಸ್ಟರ್ ಮೈಂಡ್ ರಕ್ಕಸ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸೇಫ್ ಆಗಿದ್ದಾನೆ ಅನ್ನೋದು ವಿಡಿಯೋ ಸಮೇತ ಬಹಿರಂಗವಾಗಿದೆ.
India Today World #Exclusive | India Today tracks J&K attack mastermind Hafeez Saeed’s Lahore hideout. @arvindojha with more details.#HafizSaeed #Pakistan #news #Lahore #ITVideo @Akshita_N pic.twitter.com/OlQre6ooV2
— IndiaToday (@IndiaToday) April 30, 2025
ಪಾಕಿಸ್ತಾನದ ಲಾಹೋರ್ ನಗರದಲ್ಲಿ 24*7 ಟೈಟ್ ಸೆಕ್ಯೂರಿಟಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಜನರ ಮಧ್ಯೆ ಖಾಸಗಿ ಪಾರ್ಕ್, ಮದರಸ ಹೊಂದಿರುವ ದೊಡ್ಡ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದಾನೆ. ಈತ ವಾಸಿಸುತ್ತಿರುವ ಜಾಗದ ಉಪಗ್ರಹ ಇಮೇಜ್, ವಿಡಿಯೋ ಈಗ ಲಭ್ಯ ವಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್ ಸಂಸದೆ
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಹಲ್ಗಾಮ್ ದಾಳಿಯ ಕಿಂಗ್ ಪಿನ್ ಆಗಿದ್ದಾನೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಈತನನ್ನು ಹಸ್ತಾಂತರ ಮಾಡುವಂತೆ ಭಾರತ ಸಾಕಷ್ಟು ಬಾರಿ ಬೇಡಿಕೆ ವ್ಯಕ್ತಪಡಿಸಿದರೂ ಪಾಕ್ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.