ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ – ಜಮ್ಮು ಸರ್ಕಾರ ಅಲರ್ಟ್; ವೈದ್ಯಕೀಯ ಸಿಬ್ಬಂದಿ ರಜೆ ರದ್ದು

Public TV
1 Min Read
jammu medical hospital

– ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್

ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam Terror Attack) ಪ್ರವಾಸಿಗರ ಮೇಲೆ ಉಗ್ರರ ದಾಳಿ ಬಳಿಕ ಭಾರತ-ಪಾಕ್ ಗಡಿಯಲ್ಲಿ (India-Pakistan) ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಜಮ್ಮು (Jammu) ಸರ್ಕಾರ ಅಲರ್ಟ್ ಆಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ರಜೆ ರದ್ದು ಮಾಡಲಾಗಿದೆ.

ಜಮ್ಮುವಿನ ಸರ್ಕಾರಿ ಮೆಡಿಕಲ್ ಕಾಲೇಜು & ಆಸ್ಪತ್ರೆ ಸಿಬ್ಬಂದಿಗೆ ಇದು ಅನ್ವಯ ಆಗಲಿದೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ತುರ್ತು ಔಷಧಿಗಳು ಮತ್ತು ಉಪಕರಣಗಳು ಸಿದ್ಧವಾಗಿರಬೇಕು. ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಬೇಕು ಎಂದು ಸೂಚಿಸಲಾಗಿದೆ. ತುರ್ತು ಸೇವೆಗಾಗಿ 0191-2582355 ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ʻಒಂದು ಹನಿ ನೀರುʼ ಕೂಡ ಹರಿಸಲ್ಲ; 3 ಅಂಶಗಳ ಕಾರ್ಯತಂತ್ರ ರೂಪಿಸಲು ಕೇಂದ್ರ ಸೂಚನೆ

Pahalgam Terrorists 1

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಭಾರತ ಸನ್ನದ್ಧವಾಗಿದೆ. ಅಲ್ಲದೇ, ಮೂರು ಹಂತದ ಕಾರ್ಯಾಚರಣೆಗೆ ಸೇನೆ ಮುಂದಾಗಿದೆ. ಹಿಂದೂಗಳ ಹತ್ಯಾಕಾಂಡ ಬಳಿಕವೂ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನು ಬಿಟ್ಟಿಲ್ಲ. ಎಲ್‌ಒಸಿ ಗಡಿಯಲ್ಲಿ ಪಾಕ್ ಪ್ರಚೋದನೆ ಮಾಡಿದ್ದು, ಗಡಿಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ.

ಈಚೆಗೆ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಿಂದಾಗಿ 26 ಪ್ರವಾಸಿಗರು ದಾರುಣ ಸಾವಿಗೀಡಾದರು. ಹಲವಾರು ಮಂದಿ ಗಾಯಗೊಂಡಿದ್ದರು. ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದ್ದು, ಭಯೋತ್ಪಾದಕರ ಹತ್ತಿಕ್ಕಲು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಸಿಂಧು ನದಿ ಒಪ್ಪಂದ ರದ್ದಿನಿಂದ ಪಾಕ್ ವಿಲವಿಲ – ಭಾರತದ ಉಸಿರು ನಿಲ್ಲಿಸ್ತೇವೆಂದ ಕ್ರಿಮಿ ಹಫೀಜ್

Share This Article