ಇಸ್ಲಾಮಾಬಾದ್/ ನವದೆಹಲಿ: ಭಾರತ (India) ಹಾಕಿದ ಜಲಬಾಂಬ್‌ಗೆ ಪಾಕಿಸ್ತಾನದಲ್ಲಿ (Pakistan) ಪರಿಣಾಮ ಬೀಳುತ್ತಿದೆ. ಒಂದೇ ದಿನ ಚೆನಾಬ್ ನದಿಯ (Chenab River) ನೀರಿನ ಮಟ್ಟ 31,900 ಕ್ಯುಸೆಕ್ ಇಳಿಕೆಯಾಗಿದ್ದು ಸಮಸ್ಯೆ ಆರಂಭವಾಗಿದೆ.
ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಸೋಮವಾರ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
ನೀರು ಹರಿಸುವುದನ್ನು ನಿಲ್ಲಿಸಿದ ಪರಿಣಾಮ ಪಾಕಿಸ್ತಾನದ ಮರಾಲಾ ಬಳಿ ಭಾನುವಾರ 35,000 ಕ್ಯುಸೆಕ್ ನೀರು ಹರಿಯುತ್ತಿದ್ದರೆ ಸೋಮವಾರ ಇದು 3,100 ಕ್ಯುಸೆಕ್‌ಗೆ ಇಳಿಕೆಯಾಗಿದೆ ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.
ಮರಾಲಾ ಬ್ಯಾರೇಜ್ ಸಲಾಲ್ ಅಣೆಕಟ್ಟಿನಿಂದ 76 ಕಿ.ಮೀ ದೂರದಲ್ಲಿದೆ. ಒಟ್ಟು 1.2 ದಶಲಕ್ಷ ಎಕರೆ ಅಡಿಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಭಾರತ ಇನ್ನು 4 ರಿಂದ 5 ದಿನಗಳ ಕಾಲ ನೀರು ಹರಿಸುವುದನ್ನು ನಿಲ್ಲಿಸಬಹುದು. ಸಲಾಲ್ ಅಣೆಕಟ್ಟಯ ಭರ್ತಿಯಾದ ನಂತರ ಒಂದೇ ಬಾರಿಗೆ ಚೆನಾಬ್ ನದಿಗೆ ನೀರು ಹರಿಸಿದರೆ ಪಾಕ್ ಭಾಗದಲ್ಲಿ ಪ್ರವಾಹ ಎದುರಾಗಬಹುದು ಎಂದು ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ – ಪಾಕ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಿಶ್ವಸಂಸ್ಥೆ
ಒಂದು ವೇಳೆ ಭಾರತ ಸರಿಯಾಗಿ ನೀರನ್ನು ಹರಿಸದೇ ಇದ್ದರೆ ಖಾರಿಫ್ ಬೆಳೆಗಳಿಗೆ ಭಾರೀ ಸಮಸ್ಯೆಯಾಗಲಿದೆ. ಈಗಾಗಲೇ 21% ನೀರಿನ ಕೊರತೆಯನ್ನು ಎದುರಿಸುತ್ತಿದೆ. ಚೆನಾಬ್ ನದಿಯ ಒಳಹರಿವು ಹಠಾತ್ ಇಳಿಕೆಯಾದರೆ ಖಾರಿಫ್ ಋತುವಿನ ಆರಂಭದಲ್ಲಿ ಕೊರತೆ ಎದುರಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್
ಪಹಲ್ಗಾಮ್ ಭೀಕರ ನರಮೇಧಕ್ಕೆ (Pahalgam Terror Attack) ಪ್ರತಿಯಾಗಿ ಭಾರತ ಸಿಂಧೂ ನದಿಯ ಒಪ್ಪಂದವನ್ನು ಮೊದಲ ಬಾರಿಗೆ ಅಮಾನತಿನಲ್ಲಿಟ್ಟು ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಚೆನಾಬ್ ನದಿಗೆ ಜಲಾಶಯಗಳಿಂದ ನೀರು ಹರಿಸುವುದನ್ನೇ ನಿಲ್ಲಿಸಿದೆ.
ಅಷ್ಟೇ ಅಲ್ಲದೇ ಜಲಾಶಯದಿಂದ ನೀರನ್ನು ಹರಿಸುವ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯ ಇಲ್ಲ. ನೀರನ್ನು ಯಾವಾಗ ಬೇಕಾದರೂ ತಡೆದು ನಿಲ್ಲಿಸಬಹುದು. ಯಾವಾಗ ಬೇಕಾದರೂ ಗೇಟ್ ತೆರೆದು ನದಿಗೆ ಬಿಡಬಹುದು. ಒಂದು ವೇಳೆ ದಿಢೀರ್ ಗೇಟ್ ತೆರೆದರೆ ಪಾಕ್ ಭಾಗದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಲಿದೆ.
ಭಾರತ ದೀರ್ಘ ಕಾಲ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ ಇಡಲು ಸಾಧ್ಯವಿಲ್ಲ. ಬೇಸಿಗೆ ಅವಧಿಯಲ್ಲಿ ಕೆಲ ದಿನಗಳ ಕಾಲ ನೀರನ್ನು ಸಂಗ್ರಹಿಸಿ ಇಡಬಹುದು. ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಜಲಾಶಯಗಳ ಹೂಳೆತ್ತಲು ಮುಂದಾಗಿದೆ.
#JammuAndKashmir: Visuals from Ramban, where all gates of the Baglihar Hydroelectric Power Project Dam on Chenab River are closed.#ChenabRiver #Ramban pic.twitter.com/laETkrsAcn
— All India Radio News (@airnewsalerts) May 6, 2025
ಕ್ಯುಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯುಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯುಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯುಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.